ಕೊನೆಯುಸಿರೆಳೆದ ಪ್ರಪ್ರಥಮ ನಾದಸ್ವರ ವಾದಕಿ

MS Ponnuthai demise
ಮಧುರೈ, ಜ.18: ನಾದಸ್ವರ ನುಡಿಸಿದ ಪ್ರಪ್ರಥಮ ಮಹಿಳೆ ಎಂಬ ಕೀರ್ತಿ ಗಳಿಸಿದ್ದ ಎಂಎಸ್ ಪೊಣ್ಣುತಾಯಿ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಬ್ಬರು ಪುತ್ರಿ, ಒಬ್ಬ ಮಗನನ್ನು ಕಳೆದುಕೊಂಡಿದ್ದಾರೆ.

13 ವರ್ಷ ವಯಸ್ಸಿನಲ್ಲೇ ನಾದಸ್ವರ ನುಡಿಸಿ ಕಚೇರಿ ನೀಡಿದ್ದ ಪೊಣ್ಣುತಾಯಿ ಅವರು 9 ವರ್ಷ ಬಾಲಕಿಯಾಗಿದ್ದಾಗಲೇ ನಟೇಶ ಪಿಳ್ಳೈ ಅವರಿಂದ ನಾದಸ್ವರ ವಾದನ ಅಭ್ಯಾಸ ಮಾಡಿದ್ದರು.

ಪಳನಿ ಮೂಲದ ಪೊಣ್ಣುತಾಯಿ ಅವರು ಮುಂದೆ ಮಧುರೈಯಲ್ಲಿ ನೆಲೆಸಿ ಪುರುಷಪ್ರಧಾನವಾಗಿದ್ದ ನಾದಸ್ವರ ಗಾಯನ ಲೋಕದಲ್ಲಿ ತಮ್ಮ ಛಾಪು ಮೂಡಿಸಿದರು.

ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ, ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣ ಅವರ ಸಮ್ಮುಖದಲ್ಲಿ ಸಂಗೀತ ಕಚೇರಿ ನಡೆಸಿದ ಕೀರ್ತಿಯನ್ನು ಪೊಣ್ಣುತಾಯಿ ಹೊಂದಿದ್ದರು.

ಭಾರತೀಯ ಆಕಾಶವಾಣಿ ತಿರುಚ್ಚಿ ಕೇಂದ್ರದಲ್ಲಿ 1946ರಂದು ನಾದಸ್ವರ ನುಡಿಸಿದ ಪೊಣ್ಣುತಾಯಿ ಮುಂದೆ 1989ರ ವರೆಗೂ ತಮ್ಮ ಗಾನಸೇವೆ ಒದಗಿಸಿದರು.

ನಾದ ಗಾನ ಅರಸಿ, ಕಲೈಮಾಮಣಿ ಪ್ರಶಸ್ತಿಯನ್ನು ಗಳಿಸಿದ್ದರು. ಜಪಾನ್ ನಲ್ಲಿ ನಡೆದಿದ್ದ ಪ್ರದರ್ಶನದಲ್ಲಿ ದಕ್ಷಿಣ ಭಾರತದಿಂದ ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಜೊತೆ ಪೊಣ್ಣುತಾಯಿ ಅವರ ಬಗ್ಗೆ ಕೂಡಾ ಚಿತ್ರಿಕೆ ಪ್ರದರ್ಶನವಾಗಿತ್ತು.

ತಮ್ಮ ಇಳಿವಯಸ್ಸಿನಲ್ಲೂ ಮಧುರೈನ ಸಂಗೀತ ಶಾಲೆಯಲ್ಲಿ ಚಿಣ್ಣರಿಗೆ ಸಂಗೀತ ಪಾಠ ಹೇಳಿಕೊಡಲು ಪೊಣ್ಣುತಾಯಿ ಉತ್ಸುಕರಾಗಿದ್ದರು.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+