ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಗೆ 1000 ಮೆ.ವ್ಯಾ ವಿದ್ಯುತ್ ಖರೀದಿ ಸಾಕೇ?

By Mahesh
|
Google Oneindia Kannada News

Shobha Karandlaje
ಬೆಂಗಳೂರು, ಜ.16: ಬೇಸಿಗೆಯಲ್ಲಿ ರಾಜ್ಯದ ಜನತೆ ಲೋಡ್ ಶೆಡ್ಡಿಂಗ್ ನಿಂದ ತತ್ತರಿಸದಂತೆ ನೋಡಿಕೊಳ್ಳಿ ಎಂಬ ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟಿರುವ ಇಂಧನ ಇಲಾಖೆ ದಿನಕ್ಕೆ 1000 ಮೆ.ವ್ಯಾ ವಿದ್ಯುತ್ ಖರೀದಿಗೆ ಮುಂದಾಗಿದೆ.

ಪರ ರಾಜ್ಯ ಹಾಗೂ ಖಾಸಗಿ ಸಂಸ್ಥೆಗಳಿಂದ ಪ್ರತಿದಿನ 1000 ಮೆಗಾ ವ್ಯಾಟ್ ವಿದ್ಯುತ್ ಖರೀದಿಸಿದರೂ ವಿದ್ಯುತ್ ಕ್ಷಾಮ ನೀಗುವುದಿಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KERC) ಹೇಳಿದೆ.

ಸಮಸ್ಯೆ: ಕಲ್ಲಿದ್ದಲು ಪೂರಕೆ ಸಮಸ್ಯೆ, ಆರ್ ಟಿಪಿಎಸ್ ಘಟಕಗಳ ಸ್ಥಗಿತ, ಕೇಂದ್ರದ ಗ್ರಿಡ್ ನಿಂದ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಸಿಗುತ್ತಿಲ್ಲ. ಬೇರೆಡೆಯಿಂದ ಖರೀದಿಸಿದ ವಿದ್ಯುತ್ ಪ್ರಸರಣಕ್ಕೆ ತೊಂದರೆ...ಇತ್ಯಾದಿ

ವಿವಿಧ ಮೂಲಗಳಿಂದ ಲಭ್ಯವಿರುವ ವಿದ್ಯುತ್:
* ಆರ್ ಟಿಪಿಎಸ್ ಘಟಕ : 30 ರಿಂದ 35 ದಶಲಕ್ಷ ಯೂನಿಟ್
* ಜಲವಿದ್ಯುತ್ ಘಟಕ: 35 ರಿಂದ 40 ದಶಲಕ್ಷ ಯೂನಿಟ್
* ಗಾಳಿಯಂತ್ರ, ಸೋಲಾರ್, ಕೋ ಜನರೇಷನ್ ಘಟಕ: 8 ರಿಂದ 10 ದಶಲಕ್ಷ ಯೂನಿಟ್
* ಕಿರು ಜಲವಿದ್ಯುತ್ ಯೋಜನೆ: 8 ರಿಂದ 10 ದಶಲಕ್ಷ ಯೂನಿಟ್
* ಕೇಂದ್ರ ಗ್ರಿಡ್, ಕೇಂದ್ರ ಘಟಕ: 35 ರಿಂದ 40 ದಶಲಕ್ಷ ಯೂನಿಟ್
* ಹೊರರಾಜ್ಯದಿಂದ ಖರೀದಿಸಿದ ಪ್ರಮಾಣ: 1000 ಮೆ.ವ್ಯಾ

ಒಟ್ಟು ಬೇಡಿಕೆ : 165 ರಿಂದ 170 ದಶಲಕ್ಷ ಯೂನಿಟ್, ಆದರೆ ಪೂರೈಕೆ 140 ರಿಂದ 145 ದಶಲಕ್ಷ ಯೂನಿಟ್ ಆಗುತ್ತಿದೆ.

* 1000 ಮೆ,ವ್ಯಾ ಖರೀದಿ ವೆಚ್ಚ 3,847 ಕೋಟಿ ರು.
* ಕೆಆರ್ ಇಸಿ ಪ್ರಕಾರ ಮುಂದಿನ ಎರಡು ವರ್ಷಗಳಲ್ಲಿ ರಾಜ್ಯಕ್ಕೆ 5,000 ದಶಲಕ್ಷ ಯೂನಿಟ್ ಪ್ರತಿವರ್ಷಕ್ಕೆ ಅಗತ್ಯ ಬೀಳಲಿದೆ.

ಎಲ್ಲವೂ ಅಂದುಕೊಂಡಂತೆ ಲಭ್ಯವಾದರೆ ಬೆಂಗಳೂರಿಗೆ 24 ತಾಸು ನಿರಂತರ ವಿದ್ಯುತ್ ಪೂರೈಕೆ, ಇತರೆ ನಗರಗಳಿಗೆ 23 ತಾಸು ಹಾಗೂ ಗ್ರಾಮೀಣ ಭಾಗಗಳಿಗೆ 12 ಗಂಟೆ ಸಿಂಗಲ್ಪ್ ಫೇಸ್ ಮತ್ತು 6 ಗಂಟೆ ಮೂರು ಫೇಸ್ ವಿದ್ಯುತ್ ಒದಗಿಸಬಹುದಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೊಂಡಿದ್ದಾರೆ.

English summary
Karnataka Cabinet has agreed to buy 1,000MW daily to from other states to meet the demand. No load shedding this summer says CM DV Sadananda Gowda. KERC has estimated that the state would require 5,000 million per annum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X