ಈಗ ಕ್ರಿಶ್ಚಿಯನ್ನರಿಗೂ ಬೇಡವಂತೆ ಸೂರ್ಯ ನಮಸ್ಕಾರ

ಆದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ನಕಾರದ ನಡುವೆಯೂ ಸ್ವಾಮಿ ವಿವೇಕಾನಂದರ 150ನೇ ಹುಟ್ಟುಹಬ್ಬವಾದ ಗುರುವಾರ ಮಧ್ಯಪ್ರದೇಶ ಸರಕಾರವು ಹಮ್ಮಿಕೊಂಡಿದ್ದ ಸೂರ್ಯ ನಮಸ್ಕಾರ ಅಬಾಧಿತವಾಗಿ ನೆರವೇರಿತು.
ಸುಮಾರು 6,000 ಶಾಲೆಗಳ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 1 ಕೋಟಿ ಜನ ಇಂದು ಸೂರ್ಯ ನಮಸ್ಕಾರ ನೆರವೇರಿಸಿದರು. ಆದರೆ ಕ್ರಿಶ್ಚಿಯನ್ನರ 500 ಶಾಲೆಗಳಲ್ಲಿ ಸೂರ್ಯ ನಮಸ್ಕಾರ ನಡೆಯಲಿಲ್ಲ.
ಸೂರ್ಯ ನಮಸ್ಕಾರ ಧಾರ್ಮಿಕ ಚಟುವಟಿಕೆಯಾಗಿದೆ. ಇಲ್ಲಿ ಸೂರ್ಯನನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಇದಕ್ಕೆ ಕ್ರೈಸ್ತ ಧರ್ಮದಲ್ಲಿ ವಿರೋಧವಿದೆ ಎಂದು ಕ್ರಿಶ್ಚಿಯನ್ನರು ಸೂರ್ಯ ನಮಸ್ಕಾರದಿಂದ ದೂರವುಳಿದರು.












Click it and Unblock the Notifications