ಜನಾರ್ದನ ರೆಡ್ಡಿಗೆ ಹುಟ್ಟುಹಬ್ಬ: ಇಂದೇ ಜಾಮೀನು ತೀರ್ಪು
ಬಳ್ಳಾರಿ,
ಜ. 11: ಕರ್ನಾಟಕದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಅವರಿಗೆ ಇಂದು ಹುಟ್ಟುಹಬ್ಬ. ಬಳ್ಳಾರಿಯಲ್ಲಿ ನಾಲ್ಕು ಜನರ ಮಧ್ಯೆ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ರೆಡ್ಡಿ ಅವರು ತಮ್ಮ 46ನೇ ಹುಟ್ಟುಹಬ್ಬವನ್ನು ಇಂದು ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಆಚರಿಸಿಕೊಳ್ಳುವಂತಾಗಿದೆ. ಗಮನಾರ್ಹವೆಂದರೆ ಜನ್ಮದಿನದಂದೇ ರೆಡ್ಡಿ ಜಾಮೀನು ಅರ್ಜಿ ತೀರ್ಪು ಹೊರಬೀಳಲಿದೆ. id="toptextpromo">ಆಪ್ತಮಿತ್ರನಿಗೆ
ಬರ್ತ್ ಡೆ ವಿಷ್ ಮಾಡಲು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಅವರು ಮಂಗಳವಾರ ರಾತ್ರಿಯೇ ಹೈದರಾಬಾದಿಗೆ ಹೊರಟಿದ್ದಾರೆ. ರಾಯಚೂರು ಸಂಸದ ಸಣ್ಣಫಕೀರಪ್ಪ ರಾಮುಲುಗೆ ಸಾಥ್ ನೀಡಿದ್ದು, ಮುಂದಿನ ರಾಜಕೀಯ ನಡೆ ಬಗ್ಗೆಯೂ ಇದೇ ವೇಳೆ ಚಚರಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ತಾಯಿ
ರುಕ್ಮಿಣಮ್ಮ ಪುಣ್ಯತಿಥಿಗಾದರೂ ಜಾಮೀನು ಪಡೆದು ರೆಡ್ಡಿ ಬಳ್ಳಾರಿಗೆ ಬರುತ್ತಾರೆ ಎಂಬ ಆಶಯ ಅಭಿಮಾನಿಗಳಲ್ಲಿತ್ತು. ಆದರೆ ಕೋರ್ಟ್ ಅವರಿಗೆ ತಾತ್ಕಾಲಿಕ ಜಾಮೀನು ನೀಡೊಲ್ಲ ಎಂದಿತ್ತು. ಇಂದು ಹುಟ್ಟುಹಬ್ಬದ ದಿನವಾದರೂ ನ್ಯಾಯಾಲಯ ಕರುಣೆ ತೋರುತ್ತದಾ ಎಂದು ರೆಡ್ಡಿ ಅಭಿಮಾನಿಗಳು ಚಾತಕಪಕ್ಷಿಯಂತೆ ಕಾದುಕುಳಿತಿದ್ದಾರೆ. ಬಳ್ಳಾರಿಯ ತುಂಬೆಲ್ಲ ರೆಡ್ಡಿ ಅಭಿಮಾನಿಗಳು ಶೂಭಾಶಯ ಕೋರಿ ಫ್ಲೆಕ್ಸ್, ಬ್ಯಾನರ್ ಗಳನ್ನು ಕಟ್ಟಿದ್ದಾರೆ.











Click it and Unblock the Notifications