ಸಂಸದ ಸದಾನಂದ ಸ್ಥಾನಕ್ಕೆ 'ಅತೃಪ್ತ ಆತ್ಮ' ಸಿಟಿ ರವಿ ಸ್ಪರ್ಧೆ
ಬೆಂಗಳೂರು,
ಜ.11: ರಾಜ್ಯ ಬಿಜೆಪಿಯಲ್ಲಿ 'ಅತೃಪ್ತ ಆತ್ಮ' ಎಂದು ಕರೆಯಲ್ಪಡುವ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರನ್ನು ಲೋಸಕಭೆಗೆ ಕಳಿಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. id="toptextpromo">ಕಳೆದ
ಮೂರೂವರೆ ವರ್ಷಗಳಿಂದ ಸಚಿವ ಸ್ಥಾನ ಅಲಂಕರಿಸಲು ಚಾತಕಪಕ್ಷಿಯಂತೆ ಕಾದುಕುಳಿತಿರುವ 'ದತ್ತ ಪೀಠಿ' ರವಿ ಪಕ್ಷದ ವಕ್ತಾರರಾಗಿ ಮಿಂಚಿದ್ದೇ ಬಂತು ಸಚಿವರಾಗುವ ಭಾಗ್ಯ ಒಲಿಯಲೇ ಇಲ್ಲ. ಈ ಬಗ್ಗೆ ಅನೇಕ ಬಾರಿ ಅವರು ತಮ್ಮ ಅತೃಪ್ತಿಯನ್ನು ಪಕ್ಷದ ನೇತಾರರ ಮುಂದೆ ಹೊರಹಾಕಿದ್ದರು. id='are-slot-1' class='oiad oi-axt oiadv'> id='top-searched-articles'>ಆದರೆ
ಇದೀಗ ಡಿವಿ ಸದಾನಂದಗೌಡ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅವರು ಪ್ರತಿನಿಧಿಸುತ್ತಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಖಾಲಿಯಾಗಿದೆ. ಈ ಅವಕಾಶ ಬಳಸಿಕೊಂಡು ಸಿಟಿ ರವಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಗೆದ್ದರೆ ರವಿಗೆ ಇದು ಚೊಚ್ಚಲ ಲೋಕಸಭೆ ಪ್ರವೇಶವಾಗಲಿದೆ.











Click it and Unblock the Notifications