ಆರೆಸ್ಸೆಸ್ ಸಭೆ: ಯಡಿಯೂರಪ್ಪ ಕಾಣೆಯಾಗಿದ್ದಾರೆ!

bjp-leadership-rss-meeting-yeddyurappa-missing-jan11
ಬೆಂಗಳೂರು, ಜ.11: ಬಿಜೆಪಿ ಮತ್ತು ಸಂಘ ಪರಿವಾರದ ಹಿರಿಯ ನಾಯಕರು ಇದು ಸಂಜೆ ವೇಳೆಗೆ ಸಭೆ ಆಯೋಜಿಸಿದ್ದಾರೆ. ಈ ಮಧ್ಯೆ, ಸಭೆಯ ಕೇಂದ್ರ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ರಹಸ್ಯ ಸ್ಥಳಕ್ಕೆ ತೆರಳಿದ್ದು, ಸಭೆಯಲ್ಲಿ ಏನೆಲ್ಲ ಬೇಡಿಕೆ, ವಿಷಯಗಳನ್ನು ಮಂಡಿಸಬೇಕು ಎಂಬುದರ ಬಗ್ಗೆ ಮಂಥನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಜೆಯ ಸಭೆಗೂ ಮುನ್ನ ಆರ್ಎಸ್ಎಸ್ ನ ಕೆಲವು ನಾಯಕರನ್ನು ಭೇಟಿ ಮಾಡಿದ ಬಿ.ಎಸ್. ವೈ, ಬುಧವಾರ ಬೆಳಗ್ಗೆ ತಮ್ಮ ನಿವಾಸದಿಂದ ಖಾಸಗಿ ಕಾರಿನಲ್ಲಿ ಮಾಧ್ಯಮದವರ ಕಣ್ತಪ್ಪಿಸಿ, ರಹಸ್ಯ ಸ್ಥಳ ಸೇರಿಕೊಂಡಿದ್ದಾರೆ. ಅಲ್ಲಿ ಯಡಿಯೂರಪ್ಪ ಅವರು ತಮ್ಮ ಆಪ್ತರ ಜತೆ ಗುಪ್ತ ಸಮಾಲೋಚನೆ ನಡೆಸಿದ್ದಾರೆ.

ಆಡಳಿತಾರೂಢ ಬಿಜೆಪಿಯಲ್ಲಿ ಉದ್ಭವಿಸಿರುವ ನಾಯಕತ್ವ ಗೊಂದಲ ಮತ್ತು ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ ಈ ಸಭೆ ನಡೆಯಲಿದೆ. ಸಭೆಯಲ್ಲಿ ಯಡಿಯೂರಪ್ಪ ಅವರು ಯಾವೆಲ್ಲ ಬೇಡಿಕೆ ಮಂಡಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಭೆಯಿಂದ ಸದಾನಂದಗೌಡ ದೂರ: ಈ ಮಧ್ಯೆ, ಸಭೆಗೆ ತಮಗೆ ಆಹ್ವಾನ ಬಂದಿಲ್ಲ. ಸಭೆಯ ಕೇಂದ್ರ ವ್ಯಕ್ತಿಗಳು ಮತ್ತು ಹಿರಿಯರು ಮಾತ್ರ ಈ ಸಭೆಯಲ್ಲಿ ಪಾಲ್ಗೊಳ್ಳುವುದು ಒಳಿತು. ತಾವು ಭಾಗವಹಿಸುವುದು ಔಚಿತ್ಯವಲ್ಲ ಎಂದು ಮುಖ್ಯಮಂತ್ರಿ ಡಿವಿ ಸದಾನಂದಗೌಡ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+