ಕನ್ನಡ ವಿಕಿಪೀಡಿಯಗೆ ಹುಟ್ಟುಹಬ್ಬದ ಶುಭಾಶಯ

ವಿಕಿಪೀಡಿಯದ ಸುತ್ತ ಕನ್ನಡಿಗರ ಸಮುದಾಯ ಬೆಳವಣಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು, ಸಮುದಾಯ ಸಮ್ಮಿಲನ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲು ವಿಕಿ ಪೀಡಿಯ ಬೆಂಗಳೂರು ಯೋಜಿಸಿದೆ.
ಈ ನಿಟ್ಟಿನಲ್ಲಿ ಜ.12 ರಂದು ಜಯನಗರದಲ್ಲಿ ವಿಕಿಪೀಡಿಯ ಸಂಪಾದಕರು, ವೀಕ್ಷಕರ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜ.15ರಂದು ವಿಕಿಪೀಡಿಯದ 11ನೇ ಹುಟ್ಟುಹಬ್ಬದ ಆಚರಣೆ ಸಿದ್ಧತೆ ಕೂಡಾ ಇದರಲ್ಲಿ ಸೇರಿದೆ.
ಕಾರ್ಯಕ್ರಮ ನಡೆಯುವ ಸ್ಥಳ: ಕಲ್ಮನೆ ಕಾಫಿ, ಜಯನಗರ ಬಿ.ಡಿ.ಎ ಕಾಂಪ್ಲೆಕ್ಸ್ ಹಿಂಬಾಗ, ಬೆಂಗಳೂರು
ದಿನಾಂಕ: ಜನವರಿ 12, 2012
ಸಮಯ: ರಾತ್ರಿ 7:00 ರಿಂದ 8:00
ಸಮ್ಮಿಲನದ ಉದ್ದೇಶಗಳು:
* ವಿಕಿಪೀಡಿಯದ 11ನೇ ವರ್ಷಾಚರಣೆಗೆ, ಕನ್ನಡ ವಿಕಿಪೀಡಿಯದಿಂದ ಸಮ್ಮಿಲನದ ಪ್ರಾರಂಭ
* ಕನ್ನಡ ವಿಕಿಪೀಡಿಯ ಬಳಕೆದಾರರ ಮತ್ತು ಸಂಪಾದಕರ ಭೇಟಿ
* ಕನ್ನಡ ವಿಕಿಪೀಡಿಯ ಸುತ್ತ ಒಂದಷ್ಟು ಹೊಸ ಯೋಜನೆಗಳ ಸೃಷ್ಟಿ
ಉದಾಹರಣೆಗೆ: ಮುಕ್ತ ಹಾಗು ಸ್ವತಂತ್ರ ತಂತ್ರಾಂಶಕ್ಕೆ ಸಂಬಂಧಪಟ್ಟ ಲೇಖನಗಳನ್ನು ಸಂಪಾದಿಸುವುದು ಇತ್ಯಾದಿ
* [ವಿಕಿಪುಸ್ತಕ] ಯೋಜನೆಯತ್ತ ದೃಷ್ಟಿ
ಭಾಗವಹಿಸುವವರು ಮುಂಚಿತವಾಗಿ ನೋಂದಣಿ ಮಾಡಕೊಳ್ಳಬೇಕಾಗಿದೆ. ನೋಂದಣಿ ಪುಟಕ್ಕೆ ಹೋಗಿ ತಮ್ಮ ಹೆಸರನ್ನು ಸೇರಿಸಬಹುದು.
ವಿಕಿಪೀಡಿಯ ಹುಟ್ಟುಹಬ್ಬದ ಆಚರಣೆಯನ್ನು ಜೂನ್ ಅಥವಾ ಜುಲೈ ತಿಂಗಳಿನಲ್ಲಿ ನಡೆಸಲಾಗುವುದು ಎಂದು ವಿಕಿಪೀಡಿಯ ಬೆಂಗಳೂರಿನ ಸದಸ್ಯ ಓಂಶಿವಪ್ರಕಾಶ್ ಒನ್ ಇಂಡಿಯಾಗೆ ತಿಳಿಸಿದ್ದಾರೆ.
ಕನ್ನಡ ಆವೃತ್ತಿ ವಿಕಿಪೀಡಿಯದಲ್ಲಿ 11,118 ವಿಷಯಗಳ ಕುರಿತಾದ ಪುಟಗಳಿದೆ. ವಿಕಿಪೀಡಿಯ ಬಳಗದ ಇತರ ಯೋಜನೆಗಳಾದ ವಿಕಿ ಸೋರ್ಸ್, ವಿಕಿ ಕಾಮನ್ಸ್, ವಿಕಿ ಮೀಡಿಯಾ, ವಿಕ್ಷನರಿ,ವಿಕಿ ಬುಕ್ಸ್, ವಿಕಿ ನೋಟ್ಸ್, ವಿಕಿ ಸ್ಪೀಷೀಸ್..ಇತ್ಯಾದಿ ಕೂಡಾ ಕನ್ನಡದಲ್ಲಿ ಲಭ್ಯವಿದೆ.












Click it and Unblock the Notifications