ಜಗನ್ ಆಸ್ತಿ ಮೊತ್ತ 43,000 ಕೋಟಿ ಅಂಡ್ ಕೌಂಟಿಂಗ್

YS Jagan Mohan Reddy
ಹೈದರಾಬಾದ್, ಜ.9: ಸುಮಾರು 43,000 ಕೋಟಿ ಅಕ್ರಮ ಆಸ್ತಿ ಸಂಪಾದಿಸಿರುವ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಮೇಲಿನ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ.

ಲಕ್ಸಂಬರ್ಗ್ ನ ಕಂಪನಿಯೊಂದಿಗೆ ವೈಎಸ್ ಆರ್ ಕುಟೂಂಬ ಸಂಪರ್ಕ ಹೊಂದಿರುವುದು ಖಾತ್ರಿಯಾಗಿದೆ. ಈ ಮುಂಚೆ ಸುಮಾರು 100 ಕೋಟಿ ರು ಲಕ್ಸಂಬರ್ಗ್ ಕಂಪನಿಗೆ ಸಂದಾಯವಾದ ಬಗ್ಗೆ ಬಂಡವಾಳ ಹೂಡಿಕೆದಾರದಿಂದ ಮಾಹಿತಿ ಸಿಕ್ಕಾಗ ನನಗೆ ಏನು ಗೊತ್ತಿಲ್ಲ, ಆ ಕಂಪನಿ ನನ್ನದಲ್ಲ ಎಂದು ವೈಎಸ್ ಜಗನ್ ನುಣಚಿಕೊಂಡಿದ್ದರು.

ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಕುಟುಂಬದ ಆಡಿಟರ್ ವಿಜಯ್ ಸಾಯಿ ರೆಡ್ಡಿ ಬಳಿ ಇದ್ದ ಅಮೂಲ್ಯ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದ್ದು, ಕೋರ್ಟಿಗೆ ಹಾಜರುಪಡಿಸಲಿದೆ.

ಸುಮಾರು 150 ಕೋಟಿ ಮೌಲ್ಯದ ಬೆಂಗಳೂರು ಮೂಲದ Sandur Power Company Limited (SPCL) ಕಂಪನಿಯನ್ನು 761 ಕೋಟಿ ರುಗೆ ಏರಿಸಿದ್ದು ನಿಜ ಎಂದು ವಿಜಯ್ ರೆಡ್ಡಿ ಒಪ್ಪಿಕೊಂಡಿದ್ದಾರೆ.

ಅಲ್ಲದೆ ಲಕ್ಸಂಬರ್ಗ್ ನ ಏಷ್ಯಾ ಇನ್ಫ್ರಾಸ್ಟಕ್ಚರ್ ಸಿಕಾರ್ ಕಂಪನಿಯಿಂದ ಹರಿದು ಬಂದ ನಿಧಿ ಸಂಡೂರು ಪವಲ್ ಕಂಪನಿ ಸೇರಿಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.

ಯಾರು ಒಡೆಯ?: ಲಕ್ಸಂಬರ್ಗ್ ನ ಏಷ್ಯಾ ಇನ್ಫ್ರಾ ಸ್ಟಕ್ಚರ್ ಕಂಪನಿ ಮಾಲೀಕರು ಯಾರು ಎಂಬುದನ್ನು ಹುಡುಕುತ್ತಾ ಹೋದ ಸಿಬಿಐಗೆ ವೈಟ್ ಹಾಲ್ ಅಸೋಸಿಯೇಷನ್ ಎಂಬ ಸಂಸ್ಥೆ ಹೆಸರು ಸಿಕ್ಕಿದೆ. ಆದರೆ, ಈ ಕಂಪನಿಯ ನಿಜವಾದ ವಾರಸುದಾರರು ವೈಎಸ್ ರಾಜಶೇಖರ ರೆಡ್ಡಿ ಹಾಗೂ ವೈಎಸ್ ಜಗನ್ ಎಂದು ಸಿಬಿಐ ವಾದಿಸುತ್ತಿದೆ.

ಅದರೆ, ಚಂಚಲಗುಡ ಜೈಲಿನಲ್ಲಿರುವ ವಿಜಯ ಸಾಯಿ ರೆಡ್ಡಿ ಮಾತ್ರ ಈ ಎರಡು ಕಂಪನಿಗಳ ಹಿಂದಿನ ರಹಸ್ಯವನ್ನು ಬಿಟ್ಟು ಕೊಟ್ಟಿಲ್ಲ. ಸಾಕ್ಷಿ ಟಿವಿ, ಜಗತಿ ಪಬ್ಲಿಕೇಷನ್ ಹುಟ್ಟುಕೊಂಡ ಕಥೆ, ಸಂಡೂರು ಪವರ್ ಕಂಪನಿ ಖರೀದಿಸಿ ಜಗನ್ ಸೃಷ್ಟಿಸಿದ ಐದು ಬೇನಾಮಿ ಕಂಪನಿಗಳ ಕಥೆ ಮಾತ್ರ ಸಿಬಿಐಗೆ ಸಿಕ್ಕಿದೆ. ಲಕ್ಸಂಬರ್ಗ್ ಕಂಪನಿ ಜೊತೆ ಇರುವ ಸಂಬಂಧ ಸಾಬೀತಾದರೆ, ಜಗನ್ ಆಸ್ತಿ ಮೊತ್ತ ಎಣಿಕೆ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+