ಆನೇಕಲ್ : ಆನೆಗಳಿಂದ ಐಬಿಎಂ ಉದ್ಯೋಗಿಯ ಹತ್ಯೆ
ಆನೇಕಲ್,
ಜ. 7 : ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಮಂಟಪ ಗ್ರಾಮಕ್ಕೆ ದಾಳಿ ಇಟ್ಟಿರುವ ಆನೆಗಳ ಹಿಂಡೊಂದು ಹವ್ಯಾಸಿ ಛಾಯಾಚಿತ್ರಕಾರೊಬ್ಬರನ್ನು ಕೊಂದುಹಾಕಿವೆ. ಮೃತರನ್ನು ಐಬಿಎಂ ಉದ್ಯೋಗಿ ಸೂರಪ್ಪ ಸುರೇಶ್ (35) ಎಂದು ಗುರುತಿಸಲಾಗಿದ್ದು, ಆನೇಕಲ್ ಸರಕಾರಿ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದರು. id="toptextpromo">ಸುರೇಶ್
ಅವರ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಎರಡು ವಾಹನಗಳ ಮೇಲೆ ದಾಳಿ ಮಾಡಿ ವಾಹನಗಳನ್ನು ಜಖಂ ಮಾಡಿದರು. ಇತ್ತೀಚಿನ ದಿನಗಳಲ್ಲಿ ಸತತವಾಗಿ ಆನೆಗಳು ದಾಳಿ ನಡೆಸುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಕೆಲಸಕ್ಕೆ ಹೋಗುತ್ತಿದ್ದ ಓರ್ವನನ್ನು ಬೆಳಗಿವ ಜಾವ ಆನೆಗಳು ಕೊಂದಿದ್ದವು. id='are-slot-1' class='oiad oi-axt oiadv'> id='top-searched-articles'>ಬನ್ನೇರುಘಟ್ಟ
ಅರಣ್ಯ ಪ್ರದೇಶದಿಂದ ಆನೆಗಳು ಸುತ್ತಲಿನ ಗ್ರಾಮಕ್ಕೆ ನುಗ್ಗಿ ದಾಳಿ ಮಾಡುವುದು ಇಲ್ಲಿ ಸರ್ವೇಸಾಮಾನ್ಯವಾಗಿದೆ. ಶನಿವಾರ ಕೂಡ ಹದಿನೈದಿಪ್ಪತ್ತು ಆನೆಗಳ ಹಿಂಡು ಗ್ರಾಮಕ್ಕೆ ನುಗ್ಗಿ ಸಾಕಷ್ಟು ಹಾವಳಿ ಎಬ್ಬಿಸಿದ್ದವು. ಗ್ರಾಮಸ್ಥರು ಕೂಡ ನೆರೆದು ಆನೆಗಳನ್ನು ಓಡಿಸಲು ಸಾಕಷ್ಟು ಹರಸಾಹಸಪಟ್ಟರು. ಈ ಹಂತದಲ್ಲಿ ಛಾಯಾಚಿತ್ರ ತೆಗೆಯುತ್ತಿದ್ದ ರಮೇಶ್ ಮೇಲೆ ಆನೆಗಳು ಹಲ್ಲೆ ಮಾಡಿವೆ.











Click it and Unblock the Notifications