ಅಣ್ಣಾ ಓಕೆ, ಟೀಂ ಅಣ್ಣಾ ತುಂಬಾ ಕಳಂಕಿತರು : ಜಯಪ್ರದಾ

'ಅಣ್ಣಾ ಹಜಾರೆ ಸುತ್ತ ಇರುವ, ಕಿರಣ್ ಬೇಡಿ ಮತ್ತು ಕೇಜ್ರಿವಾಲ್ ನಂಬುವಂತಿಲ್ಲ ಎಂದು ನಟಿ ಜಯಪ್ರದಾ ಹೇಳಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2012ರಲ್ಲಿ ರಾಷ್ಟ್ರೀಯ ಲೋಕ ಮಂಚ್ ಪಕ್ಷವು ಎಲ್ಲ ಸ್ಥಾನಗಳಿಗೆ ಸ್ಪರ್ಧಿಸುತ್ತದೆ ಎಂದು ಜಯಪ್ರದಾ ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ದೊರೆಯುವುದಿಲ್ಲ. ಟೀಂ ಅಣ್ಣಾ ಯಾವ ಪಕ್ಷದ ಪರ ಪ್ರಚಾರಕ್ಕಿಳಿಯಲಿದೆ ಕಾದು ನೋಡಬೇಕಿದೆ ಎಂದು ಜಯಪ್ರದಾ ಹೇಳಿದರು.
ರಾಷ್ಟ್ರೀಯ ಲೋಕ ಮಂಚ್ ಪಕ್ಷ ಚುನಾವಣೆಗೂ ಮುನ್ನ ಅಥವಾ ನಂತರ ಸಮಾಜವಾದಿ ಪಕ್ಷದೊಂದಿಗೆ ಕೈ ಜೋಡಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕದ ಜಯಪ್ರದಾ, ಆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ, ಕಾದು ನೋಡಿ ಎಂದು ಉತ್ತರಿಸಿದರು.












Click it and Unblock the Notifications