ಬಂಗಾರಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಭಾರದ್ವಾಜ್
ಬೆಂಗಳೂರು,
ಜ.4: ಇತ್ತೀಚೆಗೆ ವಿಧಿವಶರಾದ ಎಸ್. ಬಂಗಾರಪ್ಪ ಅವರ ಸದಾಶಿವ ನಗರದ ನಿವಾಸಕ್ಕೆ ರಾಜ್ಯಪಾಲ ಎಚ್ಆರ್ ಭಾರದ್ವಾಜ್ ಅವರು ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. id="toptextpromo">ಸಂಜೆ
ಸುಮಾರು 5 ಗಂಟೆಗೆ ಪತ್ನಿ ಪ್ರಫುಲ್ಲತಾ ಜತೆ ಭಾರದ್ವಾಜ್ ಅವರು, ಬಂಗಾರಪ್ಪ ಮನೆಗೆ ಭೇಟಿ ನೀಡಿದ್ದರು. ಮನೆಯಲ್ಲಿ ಬಂಗಾರಪ್ಪ ಪತ್ನಿ ಶಕುಂತಲಾ, ಮಗ ಮಧು ಬಂಗಾರಪ್ಪ ಹಾಗೂ ಮೂವರು ಪುತ್ರಿಯರು ಇದ್ದರು. ಎಲ್ಲರಿಗೂ ಭಾರದ್ವಾಜ್ ದಂಪತಿ ಸಾಂತ್ವನ ಹೇಳಿದರು. id='are-slot-1' class='oiad oi-axt oiadv'> id='top-searched-articles'>'ಬಂಗಾರಪ್ಪ
20 ವರ್ಷಗಳಿಂದ ನನಗೆ ಪರಿಚಿತರಾಗಿದ್ದರು. ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಅವರ ಕಾರ್ಯದಕ್ಷತೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಕಾಂಗ್ರೆಸ್‌ನಲ್ಲಿ ಇದ್ದಾಗ ಪಕ್ಷದ ಬೆಳವಣಿಗೆಗೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂಥ ಒಬ್ಬ ಆಡಳಿಗಾರನನ್ನು ಕಳೆದುಕೊಂಡಿರುವುದರಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ' ಎಂದು ಭಾರದ್ವಾಜ್ ಅಭಿಪ್ರಾಯಪಟ್ಟರು.











Click it and Unblock the Notifications