ಸಿಎಂ ಆಗೋ ಕನಸು ಕಂಡ ಜಗನ್ ಕಂಬಿ ಎಣಿಸಬೇಕಾ?

ವೈಎಸ್ ಜಗನ್ ಮಾಡಿದ ಅದ್ಭುತ ಯೋಜನೆ ಮತ್ತೆ ಕೈಕೊಟ್ಟಿದೆ. ವೈಎಸ್ ಆರ್ ಕಾಂಗ್ರೆಸ್ ಜೊತೆ ರಾಷ್ಟ್ರೀಯ ಕಾಂಗ್ರೆಸ್ ವಿಲೀನಗೊಳಿಸಲು ಜಗನ್ ಯತ್ನಿಸಿದ್ದರು. ಹೊಸ ವರ್ಷಾಚರಣೆಗೆ ಈ ಸಿಹಿಸುದ್ದಿ ಸಿಗಬಹುದು ಎಂದು ಎಣಿಸಿದ್ದ ಜಗನ್ ಗೆ ಈಗ ಸಿಬಿಐನಿಂದ ಬಂಧನ ಭೀತಿ ಎದುರಾಗಿದೆ.
2014ರ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಆಂಧ್ರಪ್ರದೇಶದ ಸಿಎಂ ಆಗುವ ಕನಸು ಕಾಣುತ್ತಿದ್ದ ಜಗನ್ ಗೆ ಆಘಾತವಾಗಿದೆ. ಜಗನ್ ಮೋಹನ್ ಹಾಗೂ ಸಂಸದ ದೀಪೆಂಡರ್ ಸಿಂಗ್ ಹೂಡಾ(ಹರ್ಯಾಣ ಸಿಎಂ ಭೂಪಿಂಧರ್ ಸಿಂಗ್ ಹೂಡಾ ಪುತ್ರ) ಹಾಗೂ ಸಂಸದ ಅಸಾಗುದ್ದೀನ್ ಒವಾಸಿ ಜೊತೆ ನಡೆದ ಮಾತುಕತೆ ಫಲಪ್ರದವಾಗಿಲ್ಲ.
ಓಎಂಸಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿಗೆ ಆದ ದುರ್ಗತಿ ತನಗೂ ಒದಗಿ ಬರಲಿದೆ ಎಂಬ ಭೀತಿ ಎದುರಿಸಿದ ಜಗನ್, ಕಾಂಗ್ರೆಸ್ ಜೊತೆ ವಿಲೀನಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ಜಗನ್ ಬೇಡಿಕೆ: ಅಕ್ರಮಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ರೀತಿ ನನ್ನನ್ನು ಬಂಧಿಸಬಾರದು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿದ್ಧ.
ಚಿರಂಜೀವಿ ಹಾಗೂ ಪಿಆರ್ ಪ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು. ವಿಲೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಬೇಕು
ಈ ವಿಲೀನ ಮಾತುಕೆ ಬಗ್ಗೆ ಒಳ್ಳೆ ಸುದ್ದಿ ಬರುವ ಮೊದಲೇ ಜಗನ್ ಮೇಲೆ ಕಾಂಗ್ರೆಸ್ ಕತ್ತಿ ಮಸೆದಿರುವುದು ರಾಜಕೀಯ ತಜ್ಞರಿಗೂ ಅಚ್ಚರಿ ಮೂಡಿಸಿದೆ. ಒಂದು ವೇಳೆ ಜಗನ್ ಬಂಧನದಿಂದ ಬಚಾವಾದರೆ, ವೈಎಸ್ ಆರ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ವಿಲೀನ ಖಂಡಿತ.












Click it and Unblock the Notifications