ಸಿದ್ದರಾಮಯ್ಯ ಹೊಸ ವರ್ಷಕ್ಕೆ ಹಳೆಯ ಸಂಕಲ್ಪ!

ಇದರಿಂದ ಆಗಾಗ ಅವರಿಗೆ ಸಿಎಂ ಕನವರಿಕೆಗಳು ಬೀಳುತ್ತಲೇ ಇವೆ. ಒಂದೆಡೆ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದ್ದು, ನಿದ್ದೆವೀರರ ಮಧ್ಯೆ ತೂಕಡಿಸುತ್ತಿರುವ (ಒಮ್ಮೆ ಚಿತ್ರ ನೋಡಿ!) ಸಿದ್ರಾಮಣ್ಣ ಇನ್ನಾದರೂ ಎಚ್ಚೆತ್ತುಕೊಳ್ಳಲಿ.
ಇದೀಗ ಮತ್ತೊಮ್ಮೆ 'ಕರ್ನಾಟಕ ಜನತೆ ಆಶೀರ್ವದಿಸಿದರೆ ರಾಜ್ಯದ ಮುಖ್ಯಮಂತ್ರಿಯಾಗ್ತೇನೆ' ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ವರ್ಷ ಸಂಕಲ್ಪ ತೊಟ್ಟಿದ್ದಾರೆ. ತಾಲೂಕಿನ ಸಿದ್ದನಹುಂಡಿಯಲ್ಲಿ ಸೋಮವಾರ ನಡೆದ 200 ದೇಶಿಯ ಭತ್ತದ ತಳಿಗಳ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜನತೆ ಬಯಸಿದಲ್ಲಿ ಮುಖ್ಯಮಂತ್ರಿಯಾಗುತ್ತೇನೆ ಎಂದರು.
ಪಾಪದ ಕೆಲಸ ಮಾಡಿದವರು ಸತ್ತ ಮೇಲೆ ನರಕಕ್ಕೆ ಹೋಗ್ತಾರೆ ಎಂಬ ಮಾತನ್ನು ಹಿಂದೆ ಹೇಳುತ್ತಿದ್ದರು. ಆದರೆ ಈಗ ಪಾಪ ಮಾಡಿದವರು ಜೀವಿತಾವಧಿಯಲ್ಲೇ ಜೈಲು ಸೇರಿ ನರಕಯಾತನೆ ಅನುಭವಿಸುತ್ತಿದ್ದಾರೆ. ಅಕ್ರಮ ಗಣಿ ಬಗ್ಗೆ ಗಣಿ ಧಣಿಗಳು ಪಾಪದ ಕೆಲಸ ಮಾಡ್ತಾ ಇದ್ದಾರೆ ಅಂತ ಅಧಿವೇಶನದಲ್ಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಹೇಳಿದರೂ ಕೇಳಲಿಲ್ಲ. ಕೊನೆಗೆ ರೆಡ್ಡಿ ಸೇರಿದಂತೆ ಯಡಿಯೂರಪ್ಪ ಕೂಡ ಜೈಲು ಸೇರಿದರು ಎಂದರು.











Click it and Unblock the Notifications