ಈಶ್ವರಪ್ಪನು ನಾನೂ ಒಳ್ಳೇ ಸ್ನೇಹಿತರು:ಯಡಿಯೂರಪ್ಪ ಷರಾ
ಬೆಂಗಳೂರು,
ಜ. 3: ಅತ್ತ ಹುಟ್ಟೂರಲ್ಲಿ ತಮ್ಮ ಪುತ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಮುಖಭಂಗ ಮಾಡಿರುವ ಸುದ್ದಿ ಕಿವಿಗೆ ಬಿದ್ದರೂ, ಅವರೇ ಹೇಳಿಕೊಂಡಂತೆ ಈಶ್ವರಪ್ಪಾನೇ ತಮ್ಮನ್ನು ಜೈಲಿಗೆ ಕಳಿಸಿದ್ದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮತ್ತು ಈಶ್ವರಪ್ಪ ನಡುವಣ ಸಂಬಂಧದ ಬಗ್ಗೆ 'ನಾನೂ ಅವರು ತಮ್ಮ ಒಳ್ಳೆಯ ಸ್ನೇಹಿತರು' ಎಂದು ಷರಾ ಬರೆದಿದ್ದಾರೆ. id="toptextpromo">ಸೋಮವಾರ
ರೇಸ್ ಕೋರ್ಟ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಶ್ನೆಯೊಂದಕ್ಕೆ ಲಘುವಾಗಿಯೇ ಉತ್ತರಿಸಿದ ಅವರು, ಕಳೆದ ಕೆಲವು ದಿನಗಳಿಂದ ಈಶ್ವರಪ್ಪ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನಾನು ಶಿವಮೊಗ್ಗದ ಕಡೆಗೆ ಹೋಗಿಲ್ಲ. ಈಶ್ವರಪ್ಪ ಬೆಂಗಳೂರಿಗೆ ಬಂದಿಲ್ಲ. ಆದಷ್ಟು ಬೇಗ ಭೇಟಿ ಮಾಡುತ್ತೇನೆ ಬಿಡಿ ಎಂದರು. id='are-slot-1' class='oiad oi-axt oiadv'> id='top-searched-articles'>ತಮ್ಮ
ಮತ್ತು ಈಶ್ವರಪ್ಪ ನಡುವೆ ಸಂಧಾನ ಪ್ರಯತ್ನ ನಡೆದಿದೆಯೇ ಎಂಬ ಪ್ರಶ್ನೆಗೆ ಯಡಿಯೂರಪ್ಪ 'ಇಲ್ಲ' ಎಂದು ತೀಕ್ಷ್ಣವಾಗಿಯೇ ಉತ್ತರಿಸಿದರು.











Click it and Unblock the Notifications