ಠೇವಣಿ ಸಮೇತ ರಾಮುಲು ನಿರ್ನಾಮ ಬಿಜೆಪಿ ಗುರಿ: ಸದಾನಂದ

sadananda-gowda-calls-to-defeat-sreeramulu-in-bellary
ಬಳ್ಳಾರಿ, ಡಿ.29: ರಾಜ್ಯ ಬಿಜೆಪಿ ಮೊನ್ನೆಯಷ್ಟೇ ಬಳ್ಳಾರಿ ಚುನಾವಣೆಯಲ್ಲಿ ಠೇವಣಿಯನ್ನೇ ಕಳೆದುಕೊಂಡಿತ್ತು. ಇದಕ್ಕೆ ಕಾರಣಕರ್ತರಾಗಿದ್ದು ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು. ಇದೀಗ ಬಿಜೆಪಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾತನ್ನಾಡುತ್ತಿದೆ.

ಪಕ್ಷಕ್ಕೆ ಮಣ್ಣು ಮುಕ್ಕಿಸಿದ ಅರ್ಥಾತ್ ಠೇವಣಿಯನ್ನೇ ಕಳೆದ ಶ್ರೀರಾಮುಲು ಅವರಿಗೇ ಠೇವಣಿ ಕಳೆಯುವ ಸಂಕಲ್ಪ ತೊಟ್ಟಿದೆ. ನಾಡಿನ ಮುಖ್ಯಮಂತ್ರಿ ಸದಾನಂದ ಗೌಡ ಅವರೇ ಇಂತಹ ಪ್ರತಿಜ್ಞೆ ತೊಟ್ಟಿದ್ದಾರೆ.

ಬಳ್ಳಾರಿಯಲ್ಲಿ ಇಂದು ಜಿಲ್ಲಾ ಬಿಜೆಪಿ ಸಭೆ ಆಯೋಜಿಸಲಾಗಿತ್ತು. ದೆಹಲಿಯಲ್ಲಿ ಪಕ್ಷದ ವರಿಷ್ಠರಿಂದ ಅಭಯ ಪಡೆದು ಹೊಸ ಶಕ್ತಿಯೊಂದಿಗೆ ವಾಪಸಾಗಿರುವ ಮುಖ್ಯಮಂತ್ರಿ ಸದಾನಂದ ಗೌಡರು ಸಭೆಯಲ್ಲಿ ಪಾಲ್ಗೊಂಡು ಶ್ರೀರಾಮುಲು ವಿರುದ್ಧ ನೇರವಾಗಿ ವಾಗ್ದಾಳಿ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷವನ್ನು ಮತ್ತೆ ಬಲಪಡಿಸಬೇಕು. ಈ ನಿಟ್ಟಿನಲ್ಲಿ ಜನ ಬೆಂಬಲ ಪಡೆಯಬೇಕು. ಅದಕ್ಕೂ ಮೊದಲು ಶ್ರೀರಾಮುಲು ಅವರನ್ನು ಠೇವಣಿ ಸಮೇತ ನಿರ್ನಾಮ ಮಾಡುವಂತೆ ಪಕ್ಷದ ಕಾರ್ಯರ್ತರಿಗೆ ಅವರು ಕರೆ ನೀಡಿದ್ದಾರೆ.

ಕುತೂಹಲದ ಸಂಗತಿಯೆಂದರೆ ಬದಲಾದ ರಾಜಕೀಯ ಸಮೀಕ್ಷೆಯಲ್ಲಿ ಯಡಿಯೂರಪ್ಪ ಅವರಲ್ಲಿ ಅಖಂಡ ನಿಷ್ಠೆ ವ್ಯಕ್ತಪಡಿಸಿರುವ ಶ್ರೀರಾಮುಲು ಮತ್ತು ಅವರ ಬೆಂಬಲಿಗ ಶಾಸಕರು ಇಂದು ಸದಾನಂದ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಬಿಜೆಪಿ ಸಭೆಯಿಂದ ಮಾರು ದೂರ ಉಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+