ಮೈಸೂರಲ್ಲಿ ನಾಲ್ಕು ಹೊಸ ಬಡಾವಣೆ ನಿರ್ಮಾಣ

ಸ್ವರ್ಣ ಜಯಂತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆ, ಶಾಂತವೇರಿ ಗೋಪಾಲಗೌಡ ನಗರದ ಎರಡನೆ ಹಂತ ಹಾಗೂ ಲಲಿತಾದ್ರಿ ನಗರದ ಎರಡನೆ ಹಂತದ ಯೋಜನೆ ಗಳನ್ನು ಕೈಗೆತ್ತಿಕೊಳ್ಳಲು ನಗರಾಭಿವೃದ್ಧಿ ಇಲಾಖೆಯು ಮಂಜೂರಾತಿ ನೀಡಿದೆ ಎಂದು ರಾಮದಾಸ್ ಹೇಳಿದರು.
ನೂತನ ಬಡಾವಣೆಗಳಲ್ಲಿ 15 ಸಾವಿರ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸುವ ಯೋಜನೆ ಇದೆ. 10 ಸಾವಿರ ಎಕರೆಯಲ್ಲಿ ಶೇ.45ರಷ್ಟು ಮಾತ್ರ ನಿವೇಶನ ಹಾಗೂ ಮನೆಗಳಿಗೆ ಬಳಸಿಕೊಳ್ಳಲಾಗುವುದು. ಉಳಿದ ಜಾಗದಲ್ಲಿ ಉದ್ಯಾನವನ ಸೇರಿದಂತೆ ಇನ್ನಿತರ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸಚಿವ ರಾಮದಾಸ್ ಹೇಳಿದ್ದಾರೆ.
ಔಡಹಳ್ಳಿ ಮತ್ತು ಅಲಾಳ ಗ್ರಾಮಗಳ ನಡುವೆ ಇರುವ ಸ್ವರ್ಣ ಜಯಂತಿ ಬಡಾವಣೆಯಲ್ಲಿ ಸುಮಾರು 190 ಕೋಟಿ ರೂ.ವೆಚ್ಚದಲ್ಲಿ ಲೇಔಟ್ ನಿರ್ಮಿಸಲಾಗುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆಯನ್ನು ಲಿಂಗಾಂಬುದಿ ಮತ್ತು ಎಡಹಳ್ಳಿ ನಡುವೆ ನಿರ್ಮಾಣವಾಗಲಿದ್ದು, 246 ಕೋಟಿ ರೂ.ವೆಚ್ಚ ಅಂದಾಜಿಸಲಾಗಿದೆ ಎಂದು ರಾಮದಾಸ್ ಹೇಳಿದರು.
ಶಾಂತವೇರಿ ಗೋಪಾಲಗೌಡ ನಗರ ಬಡಾವಣೆಯ ಎರಡನೆ ಹಂತದಲ್ಲಿ ಸುಮಾರು 60 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ. ಮೈಸೂರಿನ ಲಲಿತಮಹಲ್ ಎದುರು 35 ಎಕರೆ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಹೆರಿಟೇಜ್ ಪಾರ್ಕ್ ಅಭಿವೃದ್ಧಿಪಡಿಸ ಲಾಗುವುದು ಎಂದು ಸಚಿವ ರಾಮದಾಸ್ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications