ಜಾಮೂನು ಮರೆತವರಿಗೆ ಕೊಪ್ಪಳದ ಬೇಡಿಕೆಗಳ ಹಪ್ಪಳ
ಬೆಂಗಳೂರು,
ಡಿ. 23: ಕೊಪ್ಪಳ ಶಾಸಕ ಕರಡಿ ಸಂಗಣ್ಣ ನವರಿಗೆ ಸಚಿವ ಸ್ಥಾನ ನೀಡುವ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನೋಡೋಣ ಎಂದು ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರು ಹೇಳಿ ಕಳಿಸಿದ್ದಾರೆ. ಸಚಿವ ಸ್ಥಾನ ಕೊಡುವ ಮಾತು ಹಾಗಿರಲಿ, ಮೊದಲು ಕೊಪ್ಪಳ ಭಾಗದ ಬೇಡಿಕೆಯತ್ತ ಗಮನಹರಿಸಿ ಎಂದಿದ್ದಾರೆ ಸಂಗಣ್ಣ. ಹಾಗಾದರೆ ಏನು ಕೊಪ್ಪಳ ಭಾಗದ ಜನಕ್ಕೆ ತುರ್ತಾಗಿ ಆಗಬೇಕಿರುವುದು ಏನು? id="toptextpromo">ಡಾ.
ಡಿಎಂ ನಂಜುಂಡಪ್ಪ ವರದಿಯನ್ವಯ ಕೊಪ್ಪಳ ತಾಲೂಕು ಅತಿ ಹಿಂದುಳಿದ ಪ್ರದೇಶವಾಗಿದೆ. ಜಿಲ್ಲಾ ಕೇಂದ್ರ ಸ್ಥಾನ-ಮಾನವನ್ನೂ ಪಡೆದುಕೊಂಡಿದೆ. ಆದರೆ ಅನಾದಿ ಕಾಲದಿಂದಲೂ ಕ್ಷೇತ್ರವು ಅಭಿವೃದ್ಧಿ ಕಾಮಗಾರಿಗಳಿಂದ ವಂಚಿತವಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಸಚಿವ ಸ್ಥಾನ ದಯಪಾಲಿಸುವ ವಿಚಾರವನ್ನು ಪಕ್ಕಕ್ಕಿಟ್ಟು ಉಳಿದ 14 ಪ್ರಮುಖ ಕಾಮಗಾರಿಗಳ ಬಗ್ಗೆ ಸಂಗಣ್ಣ ಗಮನ ಸೆಳೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>14
ಬೇಡಿಕೆಗಳು:
ಕೊಪ್ಪಳ
ನಗರದಲ್ಲಿ
ಹೊಸ
ವೈದ್ಯಕೀಯ
ಕಾಲೇಜು
ಮಂಜೂರಾತಿ,
ಸಂಚಾರಿ
ಪೊಲೀಸ್
ಠಾಣೆ
ಮಂಜೂರು,
ತಾಲೂಕಿನ
ಬಹದ್ದೂರ
ಬಮಡಿ,
ಬೆಟಗೇರಿ,
ಅಳವಂಡಿ
ಗ್ರಾಮಗಳಲ್ಲಿ
ಏತ
ನೀರಾವರಿ
ಯೋಜನೆಗಳನ್ನು
ಕೈಗೆತ್ತಿಕೊಳ್ಳುವುದು,
ಹ್ಯಾಟಿ
ಗ್ರಾಮದಲ್ಲಿ
ಮೆಟ್ರಿಕ್
ಪೂರ್ವ
ವಸತಿ
ನಿಲಯ
ಪ್ರಾರಂಭಿಸುವುದು,
ಕೃಷಿ
ಕಾಲೇಜು
ಮಂಜೂರಾತಿ,
ಬಿ
ಸ್ಕೀಂ
ಯೋಜನೆಯಡಿ
ನೀರಾವರಿ
ಒದಗಿಸುವುದು,
ನಗರದ
ಅಭಿವೃದ್ಧಿಗಾಗಿ
50
ಕೋಟಿ
ರೂ.
ಅನುದಾನ
ಬಿಡುಗಡೆ,
ಇಂಜನಿಯರಿಂಗ್
ಕಾಲೇಜು
ಮಂಜೂರಾತಿ,
ಪಿಜಿ
ಸೆಂಟರ್
ಸ್ಥಾಪನೆ
ಸೇರಿದಂತೆ
ಈ
14
ಪ್ರಮುಖ
ಕಾಮಗಾರಿಗಳನ್ನು
ಕೈಗೆತ್ತಿಕೊಳ್ಳುವಂತೆ
ಸಂಬಂಧಪಟ್ಟವರಿಗೆ
ಆದೇಶಿಸುವಂತೆ
ಕರಡಿ
ಸಂಗಣ್ಣ
ಸಿಎಂಗೆ
ಕೋರಿದ್ದಾರೆ.












Click it and Unblock the Notifications