ಆಕ್ಷೇಪಾರ್ಹ ಮಾಹಿತಿ : 21 ವೆಬ್‌ತಾಣಗಳಿಗೆ ಸಮನ್ಸ್

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292 (ಅಶ್ಲೀಲ ಪುಸ್ತಕಗಳ ಮಾರಾಟ), 293 (ಅಪ್ರಾಪ್ತರಿಗೆ ಅಶ್ಲೀಲ ವಸ್ತುಗಳ ಮಾರಾಟ) ಮತ್ತು 120-ಬಿ (ಅಪರಾಧವೆಸಗಲು ಸಂಚು) ಅಡಿಗಳಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟ್ ಸುದೇಶ್ ಕುಮಾರ್ ಕೇಸನ್ನು ದಾಖಲಿಸಿಕೊಂಡಿದ್ದು, ಜ.13ರೊಳಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದ್ಧಾರೆ.
ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಧರ್ಮ ವಿರೋಧಿ ಮತ್ತು ಸಮಾಜ ವಿರೋಧಿ ಮಾಹಿತಿಯನ್ನು ಪ್ರಕಟಿಸದಂತೆ ನಿಷೇಧ ಹೇರಿ ಈ ಎಲ್ಲ ವೆಬ್ ಸೈಟ್ ಗಳ ವಿರುದ್ಧ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ ಮೂರು ದಿನಗಳಲ್ಲಿ ದಂಡಾಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ಸೋಷಿಯಲ್ ನೆಟ್ವರ್ಕಿಂಗ್ ವೆಬ್‌ಸೈಟುಗಳಿಗೆ ಈ ಸಮನ್ಸ್ ಬರಸಿಡಿಲಿನಂತೆ ಬಂದೆರಗಿದೆ.
ಸಲ್ಲಿಸಲಾಗಿರುವ ದಾಖಲೆಗಳಿಂದ ಅಶ್ಲೀಲ ಮತ್ತು ಆಕ್ಷೇಪಾರ್ಹ ಮಾಹಿತಿಗಳನ್ನು ಪ್ರಸಾರ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ತಾಣಗಳನ್ನು ನೋಡುವ ಎಲ್ಲ ವಯೋಮಾನದ ಜನರಿಗೆ ಇಂಥ ಅಶ್ಲೀಲ ಮಾಹಿತಿ ಸುಲಭವಾಗಿ ಸಿಗುತ್ತಿವೆ ಎಂದು ನ್ಯಾಯಾಲಯ ವಿಷಾದ ವ್ಯಕ್ತಪಡಿಸಿದೆ. ಸಾಮಾಜಿಕ ತಾಣಗಳನ್ನು ಸೆನ್ಸಾರ್ ಮಾಡಬೇಕೆಂದು ಕೇಂದ್ರ ಸಚಿವ ಕಪಿಲ್ ಸಿಬಾಲ್ ಹೇಳಿರುವ ಬೆನ್ನ ಹಿಂದೆಯೇ ನ್ಯಾಯಾಲಯ ಈ ಪ್ರಕರಣ ದಾಖಲಿಸಿಕೊಂಡಿದೆ.












Click it and Unblock the Notifications