ಸಿಬಿಐ ಶತಮಾನೋತ್ಸವದಲ್ಲಿ ಮೋದಿ ಭಾಷಣ
ಅಹ್ಮದಾಬಾದ್,
ಡಿ. 23 : ಬ್ಯಾಂಕಿಂಗ್ ಕ್ಷೇತ್ರದ ಸೇವೆಗಳು ನಗರಗಳಿಂದ ಹೊರಬಂದು ಹಳ್ಳಿಹಳ್ಳಿಗಳಿಗೂ ವಿಸ್ತರಿಸಬೇಕು, ಈ ಸೇವೆಗಳು ಇಲ್ಲಿಯವರೆಗೆ ತಲುಪಲಾರದ ಜನರನ್ನು ತಲುಪಬೇಕು. ಆಗ ಮಾತ್ರ ದೇಶದ ಉದ್ಧಾರ ಸಾಧ್ಯ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. id="toptextpromo">ಅವರು
1911ರಲ್ಲಿ ಸ್ಥಾಪಿತವಾದ ಸ್ವದೇಶಿ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 30 ವರ್ಷದ ಗುಜರಾತಿ ಪಾರ್ಸಿ ಸರ್ ಸೋರಾಬ್ಜಿ ಅವರು ಸ್ಥಾಪಿಸಿದ ಬ್ಯಾಂಕಿನ ಯಶೋಗಾಥೆಯನ್ನು ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ವಿಷಯವನ್ನಾಗಿ ಮಾಡಬೇಕು ಎಂದು ಅವರು ಕರೆ ನೀಡಿದರು. id='are-slot-1' class='oiad oi-axt oiadv'> id='top-searched-articles'>ಹಳ್ಳಿಗಳ
ಗುಣಮಟ್ಟವನ್ನು ಉತ್ತಮಪಡಿಸಲು ಯುವಕರಿಗೆ ಬ್ಯಾಂಕ್‌ಗಳು ತರಬೇತಿ ನೀಡಬೇಕು. ಸಾವಿರಾರು ಟನ್ನುಗಟ್ಟಲೆ ಬಿದ್ದಿರುವ ಬಂಗಾರವನ್ನು ಸರಿಯಾಗಿ ಬಳಸಿಕೊಂಡರೆ ಉದ್ಧಾರ ಸಾಧ್ಯ ಎಂದರು. ಚಾಟಿಯೇಟಿನ ಮಾತಿಗೆ ಹೆಸರಾಗಿರುವ ನರೇಂದ್ರ ಮೋದಿ ಬುಧವಾರ ಮಾಡಿದ, ಹಾಸ್ಯ, ಮೊನಚಿನಿಂದ ಕೂಡಿದ ಭಾಷಣದ ವಿಡಿಯೋ
ಇಲ್ಲಿದೆ.












Click it and Unblock the Notifications