ಸುಖಕರ ಪ್ರಯಾಣಕ್ಕೆ ಪೊಲೀಸರ ಬಂದೋಬಸ್ತ್

Travel guidelines for happy holidays
ಬೆಂಗಳೂರು, ಡಿ. 23 : ಕ್ರಿಸ್ಮಸ್ ಹಬ್ಬದ ರಜಾ ಸಡಗರದಲ್ಲಿ ಎಲ್ಲರಿಗೂ ಊರಿಂದೂರಿಗೆ ಹೋಗುವ ಗಡಿಬಿಡಿ. ಮಕ್ಕಳಿಗೆ ಪಾಲಕರೊಂದಿಗೆ ಅಜ್ಜಅಜ್ಜಿಯ ಊರಿಗೆ ಹೋಗುವ ತರಾತುರಿಯಿದ್ದರೆ, ವಾರಾಂತ್ಯವಾದ್ದರಿಂದ ಅನೇಕರಿಗೆ ಈ ಚಳಿಚಳಿಯಲ್ಲೂ ತಂಪುತಾಣಗಳಿಗೆ ಹೋಗುವ ಹುಮ್ಮಸ್ಸು.

ಆದರೆ, ಬೆಂಗಳೂರಿನ ಟ್ರಾಫಿಕ್ ಜಾಮ್‌ಗಳು ಸರಿಯಾದ ಸಮಯಕ್ಕೆ ರೈಲ್ವೆ ಸ್ಟೇಷನ್ ಅಥವಾ ಬಸ್ ನಿಲ್ದಾಣವನ್ನು ತಲುಪಲು ಬಿಡಬೇಕಲ್ಲ? ಮೊದಲೇ ಪ್ಲಾನ್ ಮಾಡಿಕೊಂಡು ಸಮಯಾವಕಾಶ ಇಟ್ಟುಕೊಂಡು ಮನೆ ಬಿಟ್ಟರೆ ಬಚಾವ್, ಇಲ್ಲದಿದ್ದರೆ ಟ್ರಾಫಿಕ್ ಜಾಮ್ ನಲ್ಲಿ ಸಿಗ್ಹಾಕ್ಕಿಕೊಂಡು ಬಸ್ ಅಥವಾ ರೈಲನ್ನು ತಪ್ಪಿಸಿಕೊಳ್ಳುವವರು ಅದೆಷ್ಟೋ?

ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಬೆಂಗಳೂರು ಸಂಚಾರಿ ಪೊಲೀಸರು, ಪ್ರಯಾಣಿಕರಿಗೆ ಅನುಕೂಲವಾಗಲೆಂದು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಡಿ.23 ಮತ್ತು 24ರಂದು ಅನ್ವಯವಾಗುವಂತೆ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಬೆಂಗಳೂರು ನಗರ ರೈಲು ಸ್ಟೇಷನ್ ನಲ್ಲಿ ಅನೇಕ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.

ಅವು ಕೆಳಗಿನಂತಿವೆ

* ರೈಲ್ವೆ ನಿಲ್ದಾಣದ ಮುಂದಿರುವ ಧನ್ವಂತರಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಪ್ಲಾಟ್‌ಫಾರಂ ರಸ್ತೆ, ಖೋಡೆ ಜಂಕ್ಷನ್ ನಲ್ಲಿ ವಾಹನ ನಿಲುಗಡೆ ನಿಷೇಧ.
* ಮೈಸೂರು, ಕೊಡಗು, ಕೇರಳಕ್ಕೆ ಹೋಗುವ ಬಸ್ಸುಗಳು ಮೈಸೂರು ರಸ್ತೆಯ ಬಸ್ ನಿಲ್ದಾಣದಿಂದ ಹೊರಡುತ್ತವೆ.
* ತಮಿಳುನಾಡಿಗೆ ಹೊರಡುವ ಬಸ್ಸುಗಳು ಶಾಂತಿನಗರ ಬಸ್ ನಿಲ್ದಾಣದಿಂದ ಸಾಗುತ್ತವೆ.

ಸೂಚನೆಗಳು

* ಅಂತಿಮ ಘಳಿಗೆಯಲ್ಲಿ ಗಡಿಬಿಡಿ ಮಾಡಿಕೊಳ್ಳದೆ ಸಾಕಷ್ಟು ಸಮಯ ಮೊದಲೇ ಮನೆ ಬಿಡಿ.
* ಪೊಲೀಸರು ಸೂಚಿಸಿರುವ ನಿಲ್ದಾಣಕ್ಕೇ ಹೋಗಿ ಬಸ್ಸುಗಳನ್ನು ಹಿಡಿಯಿರಿ.
* ಮಕ್ಕಳು, ಸಾಮಾನುಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಿರಿ.
* ಖಾಸಗಿ ವಾಹನದಲ್ಲಿ ನಿಲ್ದಾಣಕ್ಕೆ ಬರುತ್ತಿದ್ದರೆ ಕಿರಿದಾದ ರಸ್ತೆಗಳನ್ನು ಬಳಸಬೇಡಿ.

ಹೆಚ್ಚುವರಿ ಬಸ್ ಮತ್ತು ಮೆಟ್ರೋ : ಕ್ರಿಸ್ಮಸ್ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚುವರಿ 200 ಬಸ್ಸುಗಳ ವ್ಯವಸ್ಥೆ ಮಾಡಿದೆ. ಜೊತೆಗೆ, ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವಿನ ಮೆಟ್ರೋ ರೈಲುಗಳು ರಾತ್ರಿ 2ರವರೆಗೆ ಸಂಚರಿಸಲಿವೆ. ಸುಖಕರ ಪ್ರಯಾಣ ನಿಮ್ಮದಾಗಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+