ಕರಡಿಗೆ ಜಾಮೂನು ತಿನ್ನಿಸೋಕೆ ಮರೆತ ಸದಾನಂದ ಗೌಡ

ಆದರೆ ರಾಜಕಾರಣಿಗಳೆಂದರೆ ಪೊಳ್ಳು ಭರವಸೆಗಳ ಸರದಾರರು ಎಂಬುದನ್ನು ಈಗ ಖುದ್ದು ಮುಖ್ಯಮಂತ್ರಿಯೇ ಮತ್ತೊಮ್ಮೆ ಶೃತಪಡಿಸಿದ್ದಾರೆ. ಅಂದರೆ ಕರಡಿಗೆ ಜಾಮೂನು ತಿನ್ನಿಸೋಕ್ಕೆ ಸದಾನಂದ ಗೌಡರಿಗೆ ಜಾಣ ಮರೆವು.
ಲೆಕ್ಕಾಚಾರದಂತೆ ಚುನಾವಣೆ ಮುಗಿದು ಕರಡಿ ಸಂಗಣ್ಣ ಗೆದ್ದು ಮೂರು ತಿಂಗಳು ಕಳದರೂ ಸಚಿವ ಸ್ಥಾನದ ಮಾತಿರಲಿ, ಜಿಲ್ಲೆಯ ಪ್ರಗತಿಯನ್ನೇ ಸರಕಾರ ನಿರ್ಲಕ್ಷಿಸಿದೆ. ಆದರೂ ಹಠಕ್ಕೆ ಬಿದ್ದು 'ಸ್ವಾಮಿ ನಮ್ದು ಏನಾಯಿತು. ಕೊಪ್ಪಳ ಉದ್ಧಾರ ಮಾಡೋ ಸಮಾಚಾರ' ಎಂದು ಶಾಸಕ ಕರಡಿ ಸಂಗಣ್ಣ ಅವರು ಮೇಲ್ಮನೆ ಚುನಾವಣೆಯಲ್ಲಿ ಮತ ಹಾಕುವುದಕ್ಕೂ ಮುನ್ನ ಮುಖ್ಯಮಂತ್ರಿಗೆ ನೆನಪಿಸಿದ್ದಾರೆ.
ಸದಾನಂದರು ಮಾತ್ರ ಎಂದಿನಂತೆ ಬುದ್ಧ ಪ್ರಜ್ಞೆಯಿಂದ ವಿಶಾಲ ನಗು ನಕ್ಕಿದ್ದಾರೆ. ಕರಡಿ ಸಂಗಣ್ಣ ಬಂದ ಸಾರಿಗೆ ಸುಂಕವಿಲ್ಲ ಎಂದು ಹತಾಶೆಯಿಂದ ವಾಪಸಾಗಿದ್ದಾರೆ.












Click it and Unblock the Notifications