ಮೊಬೈಲ್ ರಿಂಗ್ ಟೋನಿಗೆ ಬೆಚ್ಚಿಬೀಳುವ ರೇಣುಕಾಚಾರ್ಯ!
ಬೆಂಗಳೂರು,
ಡಿ.23: ಮೊಬೈಲ್ ಫೋನ್ ರಿಂಗ್ ಟೋನ್ ಕಿವಿಗೆ ಬಿದ್ದರೆ ಸಾಕು ನಡುರಾತ್ರಿಯಲ್ಲೂ ಬೆಚ್ಚಿಬೀಳುತ್ತಾರೆ ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ. ಇನ್ನು ಮುಂದೆ ದೂರ ನಿಂತೇ ಅವರು ಮೊಬೈಲ್ ಮಾತು ಕೇಳಿಸಿಕೊಳ್ಳಲಿದ್ದಾರೆ. ಥ್ಯಾಂಕ್ಸ್ ಟು ಡಾಕ್ಟರ್ಸ್ ಅಡ್ವೈಸ್. ಇದು ರೇಣುಕಾಗೆ ನಿಜಕ್ಕೂ ಹೆಡೇಕ್ ತಂದಿದೆ! id="toptextpromo">ಮೊಬೈಲಿನಲ್ಲಿ
ಮಾತನಾಡಲೇ ಬೇಡಿ. ಅನಿವಾರ್ಯವಾಗಿದ್ದರೆ ತೀರಾ ಕಡಿಮೆ ಪ್ರಮಾಣದಲ್ಲಿ ಮೊಬೈಲ್ ಬಳಸಿ ಎಂದು ವೈದ್ಯರು ರೇಣುಕಾಚಾರ್ಯ ಅವರಿಗೆ ಕಟ್ಟಪ್ಪಣೆ ಮಾಡಿದ್ದಾರೆ. 'ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ನನ್ನ ಮೊಬೈಲ್ ಸಂಖ್ಯೆಗೆ ಕರೆ ಬಂದಲ್ಲಿ ನನ್ನ ಆಪ್ತ ಸಹಾಯಕರೇ ಉತ್ತರ ನೀಡಲಿದ್ದಾರೆ' ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಂದಹಾಗೆ,
ರೇಣುಕಾಚಾರ್ಯ ಇತ್ತೀಚೆಗೆ ವಿಪರೀತ ತಲೆನೋವಿನಿಂದ ಬಳಲುತ್ತಿದ್ದರು. ಅದಕ್ಕಾಗಿ, ಮೊನ್ನೆ ಮೇಲ್ಮನೆ ಚುನಾವಣೆಗೂ ಮುನ್ನ ಮಲ್ಲೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಆರ್ಐ ಸ್ಕ್ಯಾನ್ ತಪಾಸಣೆಗೆ ಒಳಗಾಗಿದ್ದರು. ಈ ಸ್ಕ್ಯಾನ್ ವರದಿ ನೋಡಿದ ವೈದ್ಯರು ಇನ್ನು ಮುಂದೆ ಮೊಬೈಲ್ ಬಳಕೆ ನಿರ್ಬಂಧಿಸುವಂತೆ ತಾಕೀತು ಮಾಡಿದ್ದಾರೆ. ಜತೆಗೆ ಕೆಲ ದಿನಗಳ ಕಾಲ ಒತ್ತಡದಿಂದ ಮುಕ್ತವಾಗಿ ವಿಶ್ರಾಂತಿ ಪಡೆಯುವಂತೆಯೂ ಸೂಚಿಸಿದ್ದಾರೆ.











Click it and Unblock the Notifications