ಗೆಳತಿ ಶಶಿಕಲಾಳನ್ನು ಹೊರಗೆ ದಬ್ಬಿದ ಜಯಲಲಿತಾ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಗೆ ವಿರುದ್ಧವಾಗಿ, ಮಾಫಿ ಸಾಕ್ಷ್ಯ ನುಡಿಯಲು ಶಶಿಕಲಾ ಮುಂಧಾಗಿದ್ದಾರೆ ಎಂಬ ಸುಳಿವರಿತ ಜಯಲಲಿತಾ ಇಂತಹ ನಿರ್ದಾಕ್ಷ್ಯಿಣ್ಯ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.
ಶಶಿಕಲಾ ಆಪ್ತರ ಜತೆ ಪಕ್ಷದ ಯಾರೊಬ್ಬರೂ ಯಾವುದೇ ರೀತಿಯ ಸಂಪರ್ಕ ಹೊಂದವಾರದು ಎಂದು ಜಯಲಲಿತಾ ಇದೇ ವೇಳೆ ಗುಡುಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಅಣ್ಣಾ ಎಡಿಎಂಕೆ ಪಕ್ಷದೊಳಗೆ ಶಶಿಕಲಾ ಗುಂಪುಗಾರಿಕೆ ನಡೆಸಿದ್ದರು. ಇತ್ತೀಚಿನ ದಿನಗಳಲ್ಲಿ ಜಯಲಲಿತಾರ ಹಿತಾಸಕ್ತಿಗೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದರು.
ಕೆಲವು ಹಿರಿಯ ಐಎಎಸ್ ಅಧಿಕಾರಿಗಳು ಶಶಿಕಲಾಗೆ ನಿಷ್ಠೆ ತೋರಿ, ಅವರಿಗೇ ದೈನಂದಿನ ಚಟುವಟಿಕೆಗಳ ಬಗ್ಗೆ ವರದಿ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಕೆಂಡಾಮಂಡಲರಾಗಿದ್ದ ಜಯಲಲಿತಾ ಸಹಿಸಲು ಸಾಧ್ಯವಾಗದೆ ಶಶಿಕಲಾರನ್ನು ಉಚ್ಛಾಟಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications