ದೆಹಲಿ, ಬಿಹಾರ ಐಟಿ ಟೆಕ್ಕಿಗಳು ನಂ.1; ಬೆಂಗಳೂರು ಟೆಕ್ಕಿ?

ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ಬಿಪಿಓ, ಹಾರ್ಡ್‌ವೇರ್ ಮತ್ತಿತರ ಐಟಿ ಸೇವೆಗಳಲ್ಲೂ ದೆಹಲಿ ಹಾಗೂ ಬಿಹಾರದ ಟೆಕ್ಕಿಗಳು ಉತ್ಕೃಷ್ಟ ನಿರ್ವಹಣೆ ತೋರುತ್ತಿದ್ದಾರೆಂದು Aspiring Minds ಎಂಬ ಮಾರುಕಟ್ಟೆ ಅಧ್ಯಯನ ಸಂಸ್ಥೆಯೊಂದು 2011ರ ಸಾಲಿನ ರಾಷ್ಟ್ರೀಯ ಉದ್ಯೋಗದಾಯಿತ್ವ ಅಧ್ಯಯನದ ವರದಿ ತಿಳಿಸಿದೆ.
ಐಟಿ, ಬಿಪಿಓ, ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಪರೀಕ್ಷಾ ವೃತ್ತಿಗಳಲ್ಲಿ ದೆಹಲಿ ಮೂಲದ ಎಂಜಿನಿಯರುಗಳು ಉತ್ತಮ ನಿರ್ವಹಣೆ ತೋರುತ್ತಿದ್ದಾರೆ. ಆದರೆ ಐಟಿ ಕ್ಷೇತ್ರದ ಉತ್ಪನ್ನಗಳನ್ನು ಹೊರತರುವಲ್ಲಿ ಬಿಹಾರ ಎಂಜಿನಿಯರುಗಳು, ದೆಹಲಿ ಎಂಜಿನಿಯರುಗಳಿಗಿಂತ ಮೊದಲ ಸ್ಥಾನದಲ್ಲಿದ್ದಾರೆ.
ಇನ್ನು, ಐಟಿ ಸೇವೆಗಳಾದ ಬಿಪಿಓ, ಕೆಪಿಓ, ಸಾಫ್ಟ್‌ವೇರ್ ಟೆಸ್ಟಿಂಗ್ ಹಾಗೂ ಹಾರ್ಡ್‌ವೇರ್ ಟೆಸ್ಟಿಂಗ್ ಕ್ಷೇತ್ರದಲ್ಲಿ ಬಿಹಾರ ಹಾಗೂ ಜಾರ್ಖಂಡ್‌ಗಳ ಎಂಜಿನಿಯರುಗಳು ದ್ವಿತೀಯ ಸ್ಥಾನದಲ್ಲಿದ್ದಾರೆ. ದೆಹಲಿಯಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಕೇಂದ್ರೀಕೃತವಾಗಿರುವುದರಿಂದ ಸಹಜವಾಗಿಯೇ ಅದು ಉತ್ಕೃಷ್ಟ ಗುಣಮಟ್ಟದ ಪ್ರತಿಭಾವಂತ ಎಂಜಿನಿಯರುಗಳ ತವರಾಗಿದೆ ಎಂದು 'ಆಸ್ಪಯಿರಿಂಗ್ ಮೈಂಡ್ಸ್" ಸಂಸ್ಥೆಯ ಸಹ ಸಂಸ್ಥಾಪಕ ಹಿಮಾಂಶು ಅಗರವಾಲ್ ಹೇಳಿದ್ದಾರೆ.












Click it and Unblock the Notifications