ಸದಾನಂದ ಗೌಡರು 2ಕ್ಕೆ ಮಾವನ ಮನೆಗೆ ಹೋಗೋದು ಖಚಿತ

ಸೋ, ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ತಮ್ಮ ಪತ್ನಿಯ ತವರು ಜಿಲ್ಲೆಯಾದ ಕೊಡಗು ಜಿಲ್ಲೆಗೆ ಹೊಸ ವರ್ಷದ ಸಂದರ್ಭದಲ್ಲಿ ಜನವರಿ 2ಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾತಿದೆ. ಆದರೆ ಅದಕ್ಕೂ ಮುನ್ನ...
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಸದಾನಂದ ಗೌಡರಲ್ಲಿ ತುಂಬಿತುಳುಕುತ್ತಿರುವ ಆತ್ಮವಿಶ್ವಾಸ. ಅಂದರೆ ಇದೇ 22ರಂದು ಮೇಲ್ಮನೆಯಲ್ಲಿ ಅವರು ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಅಲ್ಲಿ ಪಾಸಾದರೇನೇ ಮಾವನ ಮನೆಗೆ ತೆರಳಲು ಸಾಧ್ಯ. ಇಲ್ಲವಾದಲ್ಲಿ ಮಾಜಿ ಮುಖ್ಯಮಂತ್ರಿ ಪಟ್ಟದೊಂದಿಗೆ ಮಾವನ ಮನೆಗೆ ಹೆಜ್ಜೆಹಾಕಬೇಕಾಗುತ್ತದೆ. ಜತೆಗೆ ಬೇತಾಳದಂತೆ ಅವಮಾನವೂ ಅವರ ಬೆನ್ನಿಗಿರುತ್ತದೆ.
ಅದೆಲ್ಲ ಘಟಿಸದಿರಲಿ. ನಾಡಿನ ದೊರೆ ನೆಮ್ಮದಿಯಾಗಿ, ನವಶಕ್ತಿಯೊಂದಿಗೆ ಮಾವನ ಮನೆಗೆ ಹೋಗಿಬರಲಿ ಎಂದು ಸಂಜಯನಗರದಲ್ಲಿರುವ ರಾಧಾಕೃಷ್ಣನನ್ನು ಪ್ರಾರ್ಥಿಸುತ್ತಾ... ಕೊಡಗಿನ ಮಂದಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಗೌಡರನ್ನು ಸ್ವಾಗತಿಸಿ, ಸದಾನಂದ ಹೆಚ್ಚಿಸಲಿ...












Click it and Unblock the Notifications