ತುಮಕೂರಿಗೆ ಬಂದ ಹೇಮಾ:ಸಂತಸದಲ್ಲಿ ಮಿಂದ ಜನ

hemavathi-enters-tumkur-successful-suresh-kumar
ತುಮಕೂರು, ಡಿ. 19: ಮೊನ್ನೆಯಷ್ಟೇ ಇಲ್ಲಿನ ಅಮಾನಿಕೆರೆಗೆ ಹೇಮಾವತಿ ನೀರನ್ನು ಹರಿಸಿದ ಸಾಧನೆ ಮಾಡಲಾಗಿತ್ತು. ಇದೀಗ ಹೆಬ್ಬಾಕ ಕೆರೆಗೂ ಹೇಮಾವತಿ ನದಿ ನೀರು ಹರಿಸಲಾಗಿದೆ. ಇದರಿಂದ ಹೆಬ್ಬಾಕ ಸುತ್ತಮುತ್ತಲ ನಾಗರಿಕರ ಬಹುದಿನದ ಕನಸು ನನಸಾಗಿದೆ.

ನಗರಾಭಿವೃದ್ಧಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ಅವರ ಭಗೀರತ ಪ್ರಯತ್ನದಿಂದಾಗಿ ಯೋಜನೆ ಸಾಕಾರಗೊಂಡಿದ್ದು, ನರಸಾಪುರದ ಬಳಿ ನಿರ್ಮಿಸಿರುವ ಪಂಪ್ ಹೌಸ್‌ನಲ್ಲಿ ಬಟನ್ ಒತ್ತುವ ಮೂಲಕ ಅವರು ಯೋಜನೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ 20 ವರ್ಷಗಳ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿತವಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಬಡಾವಣೆಗಳ ಜನರು ಹೇಮಾವತಿ ನೀರನ್ನು ಕುಡಿಯಬಹುದಾಗಿದೆ ಎಂದರು.

47 ಕೋಟಿ ರೂ. ಯೋಜನಾ ವೆಚ್ಚದ ಕಾಮಗಾರಿಯನ್ನು ಎರಡು ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಮಳೆಗಾಲದಲ್ಲಿ ಬುಗಡನಹಳ್ಳಿಯಿಂದ ಹೆಬ್ಬಾಕ ಕೆರೆಗೆ ಹೆಚ್ಚುವರಿಯಾಗಿ ನೀರು ಸಂಗ್ರಹಿಸಿ, ಬೇಸಿಗೆಯಲ್ಲಿ ಅಲ್ಲಿಂದ ತುಮಕೂರು ನಗರಕ್ಕೆ ನೀರು ಬಿಡುವ ಯೋಜನೆಯನ್ನು 2008-09ನೆ ಸಾಲಿನಲ್ಲಿ ಆರಂಭಿಸಲಾಗಿತ್ತು. ಅನೇಕ ಅಡೆತಡೆಗಳನ್ನು ದಾಟಿ ಕಾಮಗಾರಿ ಪೂರ್ಣಗೊಂಡಿದ್ದು, ಏತ ನೀರಾವರಿಯ ಮೂಲಕ ಇದೀಗ ಹೆಬ್ಬಾಕ ಕೆರೆ ತುಂಬಿಸುವ ಕಾರ್ಯ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+