ಮೂರು ಅಮಾವಾಸ್ಯೆಗಳ ಬಳಿಕ ಅವರೇ ಮುಖ್ಯಮಂತ್ರಿ
ಬೆಂಗಳೂರು,
ಡಿ.19: ಮುಂದಿನ ಮೂರು ಅಮಾವಾಸ್ಯೆ ಕಳೆಯುವುದರೊಳಗಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹಾಲಿ ಮುಖ್ಯಮಂತ್ರಿ ಆಗಲಿದ್ದಾರೆ. ಇದು ಸತ್ಯ. ಇದನ್ನು ಅಗ್ನಿ ದೇವರ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಬೆಂಗಳೂಋಉ ಕಾಳಿಕಾ ಮಠದ ಯೋಗೇಶ್ವರ ಋಷುಕುಮಾರ ಗುರೂಜಿ ಭವಿಷ್ಯ ನುಡಿದಿದ್ದಾರೆ. id="toptextpromo">ಈ
ಹಿಂದೆ ನನ್ನ ಗುರುಗಳು ಸರಕಾರ ಬಿದ್ದುಹೋಗುತ್ತದೆ ಎಂದು ಹೇಳಿದ್ದರು. ಆದರೆ ಯಾವುದೇ ಕಾರಣಕ್ಕೂ ಸರಕಾರ ಬಿದ್ದುಹೋಗುವುದಿಲ್ಲ. ಸ್ಥಾನ ಪಲ್ಲಟವಾಗಬಹುದು ಎಂದು ನಾನು ಹೇಳಿದ್ದೆ ಎಂದು ಋಷುಕುಮಾರ ಗುರೂಜಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಹಳಷ್ಟು
ಮಂದಿ ಯಡಿಯೂರಪ್ಪ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದರು. ಈ ಹಿಂದೆ ಯಾವ ಮುಖ್ಯಮಂತ್ರಿಗೂ ಕೊಡಲಾರದಂತಹ ಕಷ್ಟ ಕೊಟ್ಟರು. ಆದರೂ ಅದನ್ನೆಲ್ಲ ಧೈರ್ಯದಿಂದ ಎದುರಿಸಿ, ಯಡಿಯೂರಪ್ಪ ನಿಜವಾದ ಜನನಾಯಕ ಎಂದು ನಿರೂಪಿಸಿಕೊಂಡಿದ್ದಾರೆ ಎಂದು ಋಷುಕುಮಾರ ಗುರೂಜಿ ತಿಳಿಸಿದ್ದಾರೆ.











Click it and Unblock the Notifications