ಸಂಕ್ರಾಂತಿ ತನಕ ಯಡಿಯೂರಪ್ಪರಿಂದ 'ನೋ' ಕ್ರಾಂತಿ

ಮಾರ್ಗಶಿರ ಶುಕ್ಲ ಏಕಾದಶಿ ದಿನದ ಒಳಗೆ ಏನಾದರೂ ಯತ್ನ ಫಲಿಸಿದರೆ ಓಕೆ, ಇಲ್ಲದಿದ್ದರೆ ಧನುರ್ಮಾಸ ಅಥವಾ ಶೂನ್ಯಮಾಸ ಆರಂಭವಾದ ಮೇಲೆ ಯಾವುದೇ ರಾಜಕೀಯ ಪ್ರಯತ್ನಗಳನ್ನು ನಡೆಸುವುದು ಶುಭಕರವಲ್ಲ ಎಂದು ಹೇಳಲಾಗಿದೆ.
ಸದಾನಂದ ಗೌಡರು ಎಂಎಲ್ಸಿ ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲ್ಲಿ ಇದರಿಂದ ಸರ್ಕಾರಕ್ಕೇನು ಬಾಧೆ ಇಲ್ಲ ಎಂಬ ಸತ್ಯ ಅರಿತಿರುವ ಯಡಿಯೂರಪ್ಪ ಈಗ ಕಾದು ನೋಡೋ ತಂತ್ರ ಅನುಸರಿಸಬೇಕಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಾಯವಾಗುವಂತೆ ಕರ್ನಾಟಕದಿಂದ 20 ರಿಂದ 22 ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಆಶ್ವಾಸನೆಯನ್ನು ನಿತಿನ್ ಗಡ್ಕರಿ ಟೀಮ್ ಗೆ ಯಡಿಯೂರಪ್ಪ ನೀಡಿ ಬಂದಿದ್ದಾರೆ.
ಮಾರ್ಗಶಿರ ಮಾಸದಲ್ಲಿ ವ್ರತ, ಭಜನೆಕೈಗೊಂಡು ಇನ್ನಷ್ಟು ಆಂತರಿಕ ಶುದ್ಧಿ ಹೊಂದಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಯಡಿಯೂರಪ್ಪ ನಿಗೂಢ ನಡೆ, ನುಡಿಯಿಂದ ವಿಪಕ್ಷಗಳು ಕೂಡಾ ಸರಿಯಾದ ದಾಳ ಉದುರಿಸಲು ಆಗದೇ ವಿಲವಿಲ ಎಂದು ಒದ್ದಾಡುತ್ತಿದೆ. ಸದ್ಯಕ್ಕೆ ಕಾದು ನೋಡು ತಂತ್ರ ಎಲ್ಲೆಡೆ ಜಾರಿಯಲ್ಲಿದೆ.












Click it and Unblock the Notifications