ಚುನಾವಣೆಯಲ್ಲಿ ಸದಾನಂದ ಗೌಡರಿಗೇ ನನ್ನ ನಿಷ್ಠೆ : ಶ್ರೀರಾಮುಲು

ಮುಖ್ಯಮಂತ್ರಿ ಸದಾನಂದಗೌಡರ ಆಯ್ಕೆಗೆ ತಮ್ಮ ಬೆಂಬಲಿತ ಶಾಸಕರು ಬಳ್ಳಾರಿ ಬೇಲಿ ಹಾಕುವುದಿಲ್ಲ ಎಂದು ಶ್ರೀರಾಮುಲು ಬಹಿರಂಗವಾಗಿಯೇ ಹೇಳಿದ್ದಾರೆ. ಇದರಿಂದ ಸದಾನಂದರು ಮತ್ತಷ್ಟು ಆನಂದತುಂದಿಲಿತರಾಗಿದ್ದಾರೆ.
ಅಸಲಿಗೆ ನಗೆ ಅಂಥಾ ಯಾವುದೇ ಐಡಿಯಾನೂ ಇರಲಿಲ್ಲ. ನನ್ನ ಶಾಸಕರೇಕೆ ಸದಾನಂದಗೌಡರ ವಿರುದ್ಧ ಮತ ಹಾಕುತ್ತಾರೆ. ನಾನು ಸ್ವತಂತ್ರ ಶಾಸಕ ಇರಬಹುದು. ಆದರೆ ಅವರೆಲ್ಲ ಪಕ್ಷದ ಚಿಹ್ನೆಯಡಿಯೇ ಗೆದ್ದು ಬಂದಿರುವಾಗ ಪಕ್ಷ ವಿರೋಧಿ ಯಾಕಾಗುತ್ತಾರೆ ಎಂದು ಬಾಳೆಹಣ್ಣು ಸುಲಿದಷ್ಟೇ ಸಲೀಸಾಗಿ ಹೇಳಿದ್ದಾರೆ.
ಉಲ್ಲೇಖಾರ್ಹ ಸಂಗತಿಯೆಂದರೆ ಬರೀ ಬಳ್ಳಾರಿ ಭಾಗದ ನಾಲ್ಕಾರು ಶಾಸಕರಷ್ಟೇ ಅಲ್ಲ ಇನ್ನೂ ಬಿಜೆಪಿಯಲ್ಲೇ ಇರುವ ಹತ್ತಾರು ಮಂದಿ ಪಕ್ಷ ತೊರೆದು ನನ್ನೊಂದಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಸನ್ಮಾನ್ಯ ರಾಮುಲು ಬಿಜೆಪಿಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದರು. ಆದರೆ ಅದೆಲ್ಲ ಈಗ ಇತಿಹಾಸ.











Click it and Unblock the Notifications