ಪಿಎಚ್.ಡಿ ವಿದ್ಯಾರ್ಥಿನಿ ಮೇಲೆ ಬೆಂಗಳೂರು ಪ್ರೊಫೆಸರ್ ಮಾನಭಂಗ

ಉಸ್ಮಾನಿಯಾ ವಿವಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಧುಮೋಹನ್ ರೆಡ್ಡಿ ಪ್ರಕಾರ ಬೆಂಗಳೂರು ಮೂಲದ ರಜತ್ ಕುಮಾರ್ ಮೊಹಂತಿ ಪಿಎಚ್. ಡಿ ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆ ಪೊಲೀಸ್ ಅತಿಥಿಯಾಗಿದ್ದಾನೆ.
ಈ ಬಗ್ಗೆ ದೂರು ನೀಡಿರುವ ಬಾಧಿತ ವಿದ್ಯಾರ್ಥಿನಿ 'ಪಾಠದ ಸಂಬಂಧ ಕೆಲವು ಸಂದೇಹಗಳಿದ್ದವು. ಅವುಗಳ ಬಗ್ಗೆ ಪಾಠ ಹೇಳಿಸಿಕೊಳ್ಳಲು ಮೊಹಂತಿ ರೂಮಿಗೆ ಹೋದೆ. ಆದರೆ ಅಲ್ಲಿ ಅವ ನನ್ನ ಮೈಮೇಲೆ ಕೈಹಾಕಿದ. ಅಶ್ಲೀಲವಾಗಿ ನಡೆದುಕೊಂಡ. ನನ್ನ ಮಾನಭಂಗಕ್ಕೆ ಯತ್ನಿಸಿದ. ಸದ್ಯ ಅವನಿಂದ ಪಾರಾಗಿ ಹೊರಬಿದ್ದೆ' ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ನಂತರ ಆಕೆ ಸ್ನೇಹಿತರ ಜತೆಗೂಡಿ ಪೊಲೀಸ್ ಠಾಣೆಗೆ ತೆರಳಿ, ದೂರು ದಾಖಲಿಸಿದ್ದಾರೆ. ಪೊಲೀಸರು ಮೊಹಂತಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ.












Click it and Unblock the Notifications