ಆರೋಪ ಮುಕ್ತರಾದ ಕ್ಷಣ ಯಡ್ಡಿ ಪುನಃ ಸಿಎಂ

KS Eshwarappa
ಬೆಂಗಳೂರು, ಡಿ. 10: ಮಾಧ್ಯಮದಲ್ಲಿ ತೇಲಿತೇಲಿ ಉಕ್ಕುವ ವರದಿಗಳಲ್ಲಿ ಯಾವುದೇ ಹುರುಳಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಈಗಲೂ ನಮ್ಮ ನಾಯಕರೆ, ಅದರಲ್ಲಿ ಸಂಶಯ ಬೇಡ.

ಅವರ ವಿರುದ್ದ ಕೇಳಿ ಬರುತ್ತಿರುವ ಆರೋಪಗಳಿಂದ ಅವರು ಮುಕ್ತರಾದ ಕ್ಷಣ ಮತ್ತೆ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಬಿಜೆಪಿ ರಾಜ್ಯಾದ್ಯಕ್ಷ ಈಶ್ವರಪ್ಪ ಶನಿವಾರ ಘಂಟಾಘೋಷವಾಗಿ ಸಾರಿದ್ದಾರೆ.

ಮುಖ್ಯಮಂತ್ರಿ ಸದಾನಂದ ಗೌಡ ಸೋಮವಾರ ( ಡಿ 12) ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ಎಲ್ಲ ತಪ್ಪು ಊಹಾಪೋಹಗಳಿಗೆ ತೆರೆ ಬೀಳಲಿದೆ.

ನಮ್ಮ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಗೊಂದಲಗಳಿಲ್ಲ ಎಂದು ಈಶ್ವರಪ್ಪ ಮತ್ತೊಮ್ಮೆ, ಮಗದೊಮ್ಮೆ ಸ್ಪಷ್ಟ ಪಡಿಸಿದ್ದಾರೆ.

ಶ್ರೀರಾಮುಲು ಅವರು ನನ್ನ ಜೊತೆ 22 ಶಾಸಕರು ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅದು ಶುದ್ಧ ಸುಳ್ಳು, ನಮ್ಮ ಶಾಸಕರು ನಮ್ಮ ಬಳಿಯೇ ಇದ್ದಾರೆ.

ಇದೆಲ್ಲಾ ಗೊಂದಲ ಮೂಡಿಸುವ ಕಾರ್ಯತಂತ್ರ. ಒಂದು ವೇಳೆ 22 ಶಾಸಕರು ರಾಮುಲುವಿಗೆ ಬೆಂಬಲ ಸೂಚಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಈಶ್ವರಪ್ಪ ಸವಾಲು ಬಿಸಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+