ಮೇಲ್ಮನೆಗೆ ಸದಾನಂದ ಸ್ಪರ್ಧೆ, ವಿಪಕ್ಷಗಳ ಕಾಟ

Cm DV Sadananda Gowda
ಬೆಂಗಳೂರು, ಡಿ.7: ಬಿಜೆಪಿ ಶಾಸಕ ಎನ್. ಶಂಕರಪ್ಪನವರ ರಾಜೀನಾಮೆ ಯಿಂದ ತೆರವಾಗಿದ್ದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಡಿ.22ರಂದು ಚುನಾವಣೆ ನಡೆಯ ಲಿದ್ದು, ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮೇಲ್ಮನೆಗೆ ಸ್ಪರ್ಧಿಸಲಿದ್ದಾರೆ. ಸದನದಲ್ಲಿ ಬಿಜೆಪಿ ಬಹುಮತವಿರುವುದರಿಂದ ಸದಾನಂದ ಗೌಡರ ಆಯ್ಕೆ ಸುಲಭ ಎಂದು ನಿರೀಕ್ಷಿಸಲಾಗಿದೆ. ಆದರೆ, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮಾಡಿಕೊಂಡು ನಿರೀಕ್ಷೆ ಸುಳ್ಳು ಮಾಡಲು ಸಿದ್ಧತೆ ನಡೆಸುತ್ತಿದೆ.

ಬಿಜೆಪಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ನಾಮಪತ್ರ ಸಲ್ಲಿಸಿದ ನಂತರ ಕಾಂಗ್ರೆಸ್ ಪಕ್ಷ ತನ್ನ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಅಹಿಂದದ ನೆಪವೊಡ್ಡಿ ಶ್ರೀರಾಮುಲು ಸೇರಿದಂತೆ ಆರು ಮಂದಿ ಪಕ್ಷೇತರರನ್ನು ತಮ್ಮ ತೆಕ್ಕೆಗೆ ಸೆಳೆಯಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ. ಬಿಜೆಪಿ ಬಗ್ಗುಬಡಿಯಲು ಅವಕಾಶ ಕಾದಿರುವ ಜೆಡಿಎಸ್ ಕೂಡಾ ಕೈ ಜೋಡಿಸಲು ಸಮ್ಮತಿಸಿದೆ.

ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
ಬಿಜೆಪಿ :119
ಕಾಂಗ್ರೆಸ್:71
ಜೆಡಿಎಸ್ :26
ಪಕ್ಷೇತರರು:7
ಸ್ಪೀಕರ್ :1
ನಾಮಕರಣ ಸದಸ್ಯ:1
ಒಟ್ಟು:225

ಸಿಎಂ ಡಿವಿಎಸ್ ವಿರುದ್ಧ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಬಳ್ಳಾರಿಯ ಮೂವರು ಬಿಜೆಪಿ ಶಾಸಕರು ಯಾರ ಪರ ವೋಟ್ ಮಾಡಲಿದ್ದಾರೆ? ಬಿಜೆಪಿ ವಿಪ್ ನೀಡಿದರೆ, ವಿಪ್ ಉಲ್ಲಂಘಿಸುತ್ತಾರಾ? ಉಲ್ಲಂಘಿಸಿದರೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವುದಿಲ್ಲವೇ? ಎಂಬ ಹಲವು ಪ್ರಶ್ನೆಗಳು ಎದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+