ಸದನದಲ್ಲಿ ರಾಜ್ಯಪಾಲರ ಮೇಲೆ ಮುಗಿಬಿದ್ದ ಈಶ್ವರಪ್ಪ

KS Eshwarappa
ಬೆಂಗಳೂರು, ಡಿ.7: ಬಳ್ಳಾರಿ ಚುನಾವಣೆ ಗೆದ್ದ ವೀರ ಬಿ ಶ್ರೀರಾಮುಲು ಎಂಟ್ರಿ ಆದ ಮೇಲೆ ಕರ್ನಾಟಕ ಅಸೆಂಬ್ಲಿ ಗರಿಕೆದರಿಕೊಂಡು ಎದ್ದು ನಿಂತಿತು. ಎಲ್ಲರೊಟ್ಟಿಗೆ ನಗುನಗುತ್ತಾ ಕೈಕುಲುತ್ತಿದ್ದ ಶ್ರೀರಾಮುಲು ನೋಡಿ ಜ್ವಾಲಮುಖಿಯಾಗಿದ್ದ ಈಶ್ವರಪ್ಪ ಅವರು ಸ್ಫೋಟಗೊಂಡಿದ್ದು ಮಾತ್ರ ಹಿರಿಯ ನಾಗರೀಕ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಮೇಲೆ.

ನೂತನ ಲೋಕಾಯುಕ್ತ ನೇಮಕಾತಿ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಾ, ಸರ್ಕಾರದ ಕೋರಿಕೆ ಮನ್ನಣೆ ನೀಡದಿರುವ ರಾಜ್ಯಪಾಲರನ್ನು ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು. ಈಶ್ವರಪ್ಪ ಅವರು ಬಳಸಿದ ಭಾಷೆ, ರಾಜ್ಯಪಾಲರನ್ನು ನಿಂದಿಸಿದ ರೀತಿಯಿಂದ ಕ್ಷಣಕಾಲ ದಂಗಾದ ವಿಪಕ್ಷ ಸದಸ್ಯರು ನಂತರ ಸಾವರಿಸಿಕೊಂಡು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ರಾಜ್ಯಪಾಲರು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ಕೈಗೊಂಬೆ ಯಾಗಿದ್ದಾರೆ ಎಂದು ಈಶ್ವರಪ್ಪ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಭಾ ನಾಯಕ ಸಿದ್ದರಾಮಯ್ಯ, ಮೊದಲಿಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಶಿಫಾರಸ್ಸು ಕಳಿಸಿ ಆಮೇಲೆ ಮಾತಾಡಿ ಎಂದು ಸವಾಲು ಎಸೆದರು.

ದಯವಿಟ್ಟು ವಾಗ್ವಾದ ನಿಲ್ಲಿಸಿ ರಾಜ್ಯಪಾಲರ ವಿರುದ್ಧ ಹೇಳಿಕೆಗಳು ಯಾವುದು ದಾಖಲಾಗುವುದಿಲ್ಲ ಸುಮ್ಮನೆ ಕಾಲಹರಣ ಮಾಡಬೇಡಿ ಎಂದು ಸಭಾಪತಿ ಕೆಜಿ ಬೋಪಯ್ಯ ಮನವಿ ಮಾಡಿಕೊಂಡಿದ್ದು ಯಾರ ಕಿವಿಗೂ ಬೀಳುವಂತಿರಲಿಲ್ಲ.

ಲೋಕಾಯುಕ್ತರ ನೇಮಕಾರಿ ವಿಚಾರ ಸದನದಲ್ಲಿ ಚರ್ಚಿಸುವಂತಿಲ್ಲ. ಇದು ಆಡಳಿತಾತ್ಮಕ ಸಮಸ್ಯೆ ಎಂದು ಕಾಂಗ್ರೆಸ್ ನ ಟಿಬಿ ಜಯಚಂದ್ರ ಅವರು ಹೇಳಿದರು. ಆದರೆ, ಈಶ್ವರಪ್ಪ ಮಾತ್ರ ದಣಿವಾಗದಂತೆ ಮಾತಾಡುತ್ತಲೇ ಇದ್ದರು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+