ಅಣೆಕಟ್ಟು ವಿವಾದ: ಅಯ್ಯಪ್ಪನಿಗೆ ತಮಿಳರ ನಿಷೇಧ

ಅಣೆಕಟ್ಟು ವಿವಾದ ಉಲ್ಬಣಗೊಂಡಿದ್ದರಿಂದ ಆಯಕಟ್ಟಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ, ತಮಿಳುನಾಡಿನ ಭಕ್ತತು ಇದನ್ನು ತಿಳಿಯದೆ ಶಬರಿ ಮಲೆ ಕಡೆಗೆ ಹೊರಟ್ಟಿದ್ದರು. ತಮಿಳರ ಮೇಲೆ ದಾಳಿ ನಡೆಯುವ ಭೀತಿಯಿಂದ ಭಕ್ತರನ್ನು ಚೌಕ್ ಪೋಸ್ಟ್ ಬಳಿ ತಡೆ ಹಿಡಿಯಲಾಯಿತು.
ಇದರಿಂದ ಕೋಪಗೊಂಡ ತಮಿಳರು, ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಹಿಷ್ಕಾರ ಹಾಕಿ ವಾಪಾಸ್ ಹೋಗಿದ್ದಾರೆ. ಭಕ್ತ ಹಾಗೂ ದೇವರ ನಡುವಿನಲ್ಲಿ ರಾಜಕೀಯ ತರುತ್ತಿದ್ದಾರೆ ಇದು ನಮಗೆ ತುಂಬಾ ದುಃಖ ತಂದಿದೆ. ನಾವು ಇಲ್ಲಿ ಕಾದುಕೊಂಡು ಕುಳಿತಿರಲು ಸಾಧ್ಯವಿಲ್ಲ ಎಂದು ತಮಿಳು ಭಕ್ತರು ಪ್ರತಿಕ್ರಿಯಿಸಿದ್ದಾರೆ.
ಇಡುಕ್ಕಿಯ ಕುಮಿಲಿ ನಗರದ ಬಳಿ ಐವರಿಗಿಂತ ಹೆಚ್ಚು ಜನ ನಿಲ್ಲುವಂತಿಲ್ಲ ಎಂದು ಆಜ್ಞೆ ಹೊರಡಿಸಲಾಗಿದೆ. ಕೇರಳ ಹಾಗೂ ತಮಿಳುನಾಡು ನಡುವಿನ ಹೋರಾಟಗಾರರು ಅಣೆಕಟ್ಟಿನ ನೆಪದಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದರು.
ಈ ನಡುವೆ, ಮುಲ್ಲಪೆರಿಯಾರ್ ಅಣೆಕಟ್ಟು ಇರುವ ಜಾಗದಲ್ಲಿ ಹೊಸ ಡ್ಯಾಂ ಕಟ್ಟುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಎಂಡಿಎಂಕೆ ನಾಯಕ ವೈಕೋ ಅವರು ಗುರುವಾರದಂದು(ಡಿ.8) ಒಂದು ದಿನದ ಉಪವಾಸ ಸತ್ಯಾಗ್ರಾಹ ಕೈಗೊಂಡಿದ್ದಾರೆ.












Click it and Unblock the Notifications