'ಫ್ಯಾನ್' ದಾಳಿ ಭೀತಿ: ಟ್ರಾಫಿಕ್ ಕಿರಿಕಿರಿಗೆ ಸಜ್ಜಾಗಿ

ಇದಕ್ಕೂ ಮುನ್ನ ರಾಮುಲು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಬೆಂಗಳೂರಿಗೆ ಇಂದು ಬೆಳಗ್ಗೆ ಆಗಮಿಸುತ್ತಿದ್ದು, ರಾಜಧಾನಿಯ ಟ್ರಾಫಿಕ್ ಜಾಮ್ ಏರುಪೇರಾಗುವ ಸಾಧ್ಯತೆಯಿದೆ. ರಾಮುಲು ಅಭಿಮಾನಿಗಳು ನೂರಾರು ಬಸ್ಸುಗಳಲ್ಲಿ ನಗರಕ್ಕೆ ಬರಲಿದ್ದು, ಸಂಚಾರದಟ್ಟಣೆಯಾಗಲಿದೆ. ಆದ್ದರಿಂದ ನಗರವಾಸಿಗಳು ಪೂರ್ವಾಲೋಚನೆಯಿಂದ ತಮ್ಮ ತಮ್ಮ ದಾರಿ ಹುಡುಕಿಕೊಳ್ಳುವುದು ಕ್ಷೇಮ.
ಪಕ್ಷೇತರ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಹೈದರಾಬಾದ್‌ನ ಚಂಚಲಗೂಡ ಜೈಲಿಗೆ ತೆರಳಿ ಆಪ್ತ ಸ್ನೇಹಿತ, ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿ ಮಾಡುವುದಾಗಿ ಶ್ರೀರಾಮುಲು ತಿಳಿಸಿದ್ದಾರೆ. ರೆಡ್ಡಿ ಆಶೀರ್ವಾದ ಪಡೆದು ಮುಂದಿನ ರಾಜಕೀಯ ನಡೆ ಕುರಿತು ಸಮಾಲೋಚನೆ ಮಾಡುವುದಾಗಿ ಹೇಳಿದರು.
ಪಕ್ಷೇತರ ಶಾಸಕ ಶ್ರೀರಾಮುಲು ಅವರು ಜೆಡಿಎಸ್, ಜೆಡಿಯುಗೆ ಸೇರುವ ಮತ್ತು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಪ್ರಸ್ತಾವನೆ, ಚಿಂತನೆ ಸದ್ಯಕ್ಕಿಲ್ಲ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಗುರಿ ಹೊಂದಿದ್ದು, ಅದು ನನ್ನ ಮುಂದಿನ ಕನಸಾಗಿದೆ. ಅದನ್ನು ಬೇರೆ ಪಕ್ಷಗಳಿಗಿಂತ ಹೇಗೆ ವಿಭಿನ್ನ ಹಾಗೂ ಮಾದರಿ ಪಕ್ಷ ಮಾಡಬೇಕೆಂಬ ಆಲೋಚನೆಯಿದೆ. ಅದಕ್ಕೆ ಒಂದು ಹೊಸ ರೂಪ ನೀಡಲಾಗುವುದು ಎಂದರು.












Click it and Unblock the Notifications