ಬಳ್ಳಾರಿ ಸೋಲು ನಿರೀಕ್ಷಿತ : ಯಡಿಯೂರಪ್ಪ ಬಾಂಬ್

bellary-defeat-expected-bs-yeddyurappa
ಬಂಟ್ವಾಳ, ಡಿ.7: 'ಬಳ್ಳಾರಿ ಚುನಾವಣೆಯ ಫಲಿತಾಂಶ (ಸೋಲು) ನಿರೀಕ್ಷಿತವಾಗಿತ್ತು. ಆದರೆ ಇದರಿಂದ ಸರಕಾರಕ್ಕೆ ಯಾವುದೇ ಅಪಾಯವಿಲ್ಲ' ಎಂದು ಚುನಾವಣೆಯ ಸ್ಟಾರ್ ಕ್ಯಾಂಪೇನರ್, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ಅವರೇ ಗೆಲ್ಲುತ್ತಾರೆ ಎಂದು ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದ ಇಡೀ ಬಿಜೆಪಿ ಸರಕಾರದ ಪ್ರತಿನಿಧಿಗಳು ಬಳ್ಳಾರಿ ಚುನಾವಣೆಯ ಮತ ಎಣಿಕೆ ದಿನದವರೆಗೂ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದರು ಎಂಬುದು ಗಮನಾರ್ಹ.

ಇಲ್ಲಿನ ಪಾಣೆಮಂಗಳೂರು ನರಹರಿ ಪರ್ವತ ತಪ್ಪಲಿನ ನಂದಗೋಕುಲ ಗೋಶಾಲೆಯಲ್ಲಿ ನಡೆಯುತ್ತಿರುವ ವಾಜಪೇಯ ಸೋಮಯಾಗದಲ್ಲಿ ಪಾಳ್ಗೊಂಡ ಬಳಿಕ ಅವರು ಪತ್ರಕರ್ತರ ಜತೆಗೆ ಮಾತನಾಡಿದರು. ಯಾಗವು ನ. 26ರಂದು ಆರಂಭವಾಗಿದ್ದು ಡಿ. 23ರ ತನಕ ಒಟ್ಟು 28 ದಿನಗಳ ಕಾಲ ನಡೆಯಲಿದೆ.

'ಕಳೆದ ಚುನಾವಣೆಯಲ್ಲಿ ಬಳ್ಳಾರಿಯನ್ನು ಶ್ರೀರಾಮುಲುಗೆ ಬಿಟ್ಟುಕೊಟ್ಟಿದ್ದೆವು. ಹಾಗಾಗಿ ಈ ಬಾರಿ ನಮ್ಮ ಬಹುತೇಕ ಕಾರ್ತಯಕರ್ತರು ಅವರ ಹಿಡಿತದಲ್ಲಿದ್ದರು. ಬಳ್ಳಾರಿಯಲ್ಲಿ ಪಕ್ಷ ಸಂಗಟನೆ ಬಲವಾಗಿರಲಿಲ್ಲ' ಎಂದು ಅವರು ನುಡಿದರು.

'ಬಳ್ಳಾರಿಯಲ್ಲಿ ಗೆದ್ದಿರುವ ಶ್ರೀರಾಮುಲು ಯಾವುದೇ ಪಕ್ಷ ಕಟ್ಟಲು ಮುಕ್ತರಾಗಿದ್ದಾರೆ. ಬಿಜೆಪಿ ಆದಕ್ಕಾಗಿ ತಲೆ ಕೆಡಿಸಿಕೊಳ್ಳದು. ಇದರಿಂದ ಸರಕಾರಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ' ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅಬಕಾರಿ ಸಚಿವ ರೇಣುಕಾಚಾರ್ಯ ಕೂಡ ಆಗಮಿಸಿದ್ದು ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜತೆಗೆ ಪಾಲ್ಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+