ರಾಮುಲು ಜನಾದೇಶ: ಸಂತೋಷ್ ಹೆಗ್ಡೆಗೆ ಮುಖಭಂಗವೇ?
ಬೆಂಗಳೂರು,
ಡಿ.5: ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ಬೇಸರಗೊಂಡು ಶ್ರೀರಾಮುಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. id="toptextpromo">ಬಳ್ಳಾರಿಯ
(ಅಕ್ರಮ) ಗಣಿವೀರ ಜನಾರ್ದನ ರೆಡ್ಡಿಯ ಖಾಸಾ ಬಂಟನೇ ಮರು ಚುನಾವಣೆಯಲ್ಲಿ ಭರ್ಜರಿ ಜನಾದೇಶ ಪಡೆದಿರುವುದರಿಂದ ಅವರು ಆರೋಪ ಮುಕ್ತರಾದರು ಅನ್ನಬಹುದಾ? ಅಥವಾ ಅಕ್ರಮ ಗಣಿ ವರದಿಯಲ್ಲಿ ರಾಮುಲು ಹೆಸರನ್ನು ಪ್ರಸ್ತಾಪಿದ್ದಕ್ಕಾಗಿ ನ್ಯಾ. ಸಂತೋಷ್ ಹೆಗ್ಡೆ ಅವರು ಈಗ ಪಶ್ಚಾತ್ತಾಪ ಪಡಬೇಕಾ!? ಅಥವಾ ಈ ಜನಾದೇಶದ ಅರ್ಥ ನ್ಯಾ. ಸಂತೋಷ್ ಹೆಗ್ಡೆ ಅವರ ಧ್ವನಿ ಅಡಗಿಸಬಹುದಾ ಎಂದು ಆತಂಕ ಪಡಬೇಕಾ!? ಇದು ನ್ಯಾ. ಸಂತೋಷ್ ಹೆಗ್ಡೆ ಅವರಿಗೆ ಸಂದ ಪರಾಜಯವಾ? id='are-slot-1' class='oiad oi-axt oiadv'> id='top-searched-articles'>'ನೋ
ಛಾನ್ಸ್. ಚುನಾವಣೆಯೇ ಬೇರೆ. ಕಾನೂನು ಚೌಕಟ್ಟೇ ಬೇರೆ. ಆರೋಪಗಳೇನಿದ್ದರೂ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾಗಿರುವುದು. ಇದರಿಂದ ನನ್ಗೆ ಹಿನ್ನಡೆ ಎಂದಾಗಲಿ ಅಥವಾ ನನ್ನ ಧ್ವನಿ ಕ್ಷೀಣಿಸುತ್ತದೆ ಎಂಬ ಆತಂಕವಾಗಲಿ ಬೇಡ' ಎಂದು ಸ್ವತಃ ಸಂತೋಷ್ ಹೆಗ್ಡೆ ಅವರೇ ಸ್ಪಷ್ಟಪಡಿಸಿದ್ದಾರೆ. 'ಚುನಾವಣೆಯಲ್ಲಿ ಗೆಲ್ಲಲ್ಲಿ, ಸೋಲಲಿ, ಅವರ ಮೇಲಿನ ಆರೋಪಗಳು ಹಾಗೆಯೇ ಇರುತ್ತವೆ' ಎಂದಿದ್ದಾರೆ.











Click it and Unblock the Notifications