ಒಬಾಮಾ ಟೀಂಗೆ ಮತ್ತೊಬ್ಬ ಭಾರತೀಯ ಅರುಣ್ ಸೇರ್ಪಡೆ

ಮುಂಬೈ ಐಐಟಿಯ ಹಳೆ ವಿದ್ಯಾರ್ಥಿಯಾಗಿರುವ ಮಜುಂದಾರ್‌ರನ್ನು ಅಮೆರಿಕದ ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ ಎಂದು ಶ್ವೇತಭವನ ಪ್ರಕಟಿಸಿದೆ.
2009ರಿಂದ ಮಜುಂದಾರ್ ಇಂಧನ ಇಲಾಖೆಯ ಸುಧಾರಿತ ಸಂಶೋಧನಾ ಯೋಜನೆಗಳ ಸಂಸ್ಥೆ (ARPA-E)ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದಕ್ಕೂ ಮೊದಲು ಅರುಣ್ ಅವರು ಲಾರೆನ್ಸ್ ಬರ್ಕ್ಲೆ ನ್ಯಾಷನಲ್ ಲ್ಯಾಬೊರೇಟರಿಯಲ್ಲಿ ಇಂಧನ ಹಾಗೂ ಪರಿಸರ ಇಲಾಖೆಯ ಸಹ ಪ್ರಯೋಗಾಲಯ ನಿರ್ದೇಶಕರಾಗಿದ್ದರು ಹಾಗೂ ಬರ್ಕ್ಲೆಯಲ್ಲಿನ ಕ್ಯಾಲಿಫೋರ್ನಿಯದ ವಿವಿಧ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಮೆಟೀರಿಯಲ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು.
2005ರಲ್ಲಿ ನ್ಯಾಶನಲ್ ಅಕಾಡಮಿ ಆಫ್ ಎಂಜಿನಿಯರಿಂಗ್‌ನ ಸದಸ್ಯರಾಗಿ ಆಯ್ಕೆಗೊಂಡಿದ್ದರು. 1985ರಲ್ಲಿ ಮುಂಬೈಯ ಭಾರತೀಯ ತಂತ್ರಜ್ಞಾನ ಸಂಸ್ಥೆ(IIT)ಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಹಾಗೂ 1989ರಲ್ಲಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯ ದಿಂದ ಡಾಕ್ಟರೇಟ್ ಗಳಿಸಿದ್ದಾರೆ.












Click it and Unblock the Notifications