ಪ್ರಿನ್ಸಿಪಾಲರು ಬುದ್ಧಿ ಹೇಳಿದ್ದಕ್ಕೆ ನೇಣು ಹಾಕಿಕೊಂಡ ವಿದ್ಯಾರ್ಥಿ
ಚಿತ್ರದುರ್ಗ,
ನ.24: ಇತ್ತಿತ್ತಲಾಗಿ ವಿದ್ಯಾರ್ಥಿಗಳು ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಆತ್ಮಹತ್ಯೆಗೆ ಶರಣಾಗುತ್ತಿರುವುದು ಪೋಷಕರನ್ನು ಆತಂಕಕ್ಕೆ ಈಡು ಮಾಡುತ್ತಿರುವ ವಿಚಾರ. ತಂದೆತಾಯಿ, ಗುರುಹಿರಿಯರು ಹೇಳುವ ಬುದ್ಧಿಮಾತುಗಳೇ ಇವರ ಪಾಲಿಗೆ ತಪ್ಪಾಗಿ ಪರಿಣಮಿಸುತ್ತಿವೆ. ಇಂತಹದ್ದೇ ಒಂದು ಘಟನೆ ಚಿತ್ರದುರ್ಗದಲ್ಲಿ ಬುಧವಾರ (ನ.23) ನಡೆದಿದೆ. id="toptextpromo">ಚೆನ್ನಾಗಿ
ಓದುವ ವಿಚಾರದಲ್ಲಿ ಹಾಗೂ ಕಾಲೇಜಿಗೆ ಬರುವ ವಿಚಾರದಲ್ಲಿ ಪ್ರಿನ್ಸಿಪಾಲರೊಬ್ಬರು ವಿದ್ಯಾರ್ಥಿಗೆ ಆತನ ಸ್ನೇಹಿತರ ಎದುರಿಗೆ ಬುದ್ಧಿಮಾತು ಹೇಳಿದ್ದಕ್ಕೆ ಬೇಸರಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಿನ್ಸಿಪಾಲರು ಹೇಳಿದ ಬುದ್ಧಿಮಾತನ್ನು ತಪ್ಪಾಗಿ ತಿಳಿದುಕೊಂಡು ಮನೆಗೆ ಬಂದು ರೂಂನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಈ ಘಟನೆ ಬುಧವಾರ ರಾತ್ರಿ ನಗರದ ಗೋಪಾಲಪುರ ರಸ್ತೆಯ ಪೊಲೀಸ್ ವಸತಿಗೃಹದ ಹಿಂಭಾಗ ಮನೆಯೊಂದರಲ್ಲಿ ನಡೆದಿದೆ. id='are-slot-1' class='oiad oi-axt oiadv'> id='top-searched-articles'>ಸಿದ್ದಯ್ಯ
ಎಂಬುವರ ಮಗ ವರುಣ್ (16) ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಈತನು ಎಸ್‌ಆರ್‌ಎಸ್ ಕಾಲೇಜ್‌ನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬಂದಿರುತ್ತದೆ. ಈ ಬಗ್ಗೆ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications