ಮಂಗಳ ಗ್ರಹದ ಮೇಲೆ ಗಣಿಗಾರಿಕೆ: ನಾಸಾದಿಂದ; ರೆಡ್ಡಿಯಿಂದ ಅಲ್ಲ!

ನಾಳಿದ್ದು ಮಂಗಳ ಗ್ರಹದತ್ತ ಚಿಮ್ಮಲಿರುವ ನಾಸಾ ಸಾಹಸದ 'ಕ್ಯೂರಿಯಾಸಿಟಿ' ಸಾವಕಾಶವಾಗಿ ಎದುರಿಗೆ ಸಿಗುವ ಬಂಡೆಗಳ ಮೇಲೆ ಚಿಕ್ಕ ಚಿಕ್ಕ ರಂಧ್ರ ಮಾಡಿ ಅಧ್ಯಯನಕ್ಕೆ ಬಳಸುತ್ತದೆ. ಆದರೆ ಇಲ್ಲಿ ರೆಡ್ಡಿ ಭೂಪರು ಭೂಮಿಗೇ ರಂಧ್ರ ಹಾಕಿ ಬಳ್ಳಾರಿ ಗಣಿ ಭೂಮಿಯನ್ನು ಪ್ರಪಾತದಷ್ಟು ಆಳಕ್ಕೆ ಕೊರೆದಿಟ್ಟಿದ್ದಾರೆ.
ಇನ್ನು ನಾಸಾ ವಿಜ್ಞಾನಿಗಳು ಇದಕ್ಕಾಗಿ 10 ವರ್ಷದಷ್ಟು ಶ್ರಮ ಹಾಕಿದ್ದಾರೆ. ಇದೂ ನಿಜವೇ... ನಮ್ಮ ರೆಡ್ಡಿ ಪಟಾಲಂ ಸಹ ಇಷ್ಟೇ ಅವಧಿಯಲ್ಲಿ ಬಳ್ಳಾರಿ ಗಣಿ ಭೂಮಿಯನ್ನು ತರಿದು ಹಾಕಿದ್ದಾರೆ. ಅಂದಹಾಗೆ ನಾಸಾ ವಿಜ್ಞಾನಿಗಳು 'ಕ್ಯೂರಿಯಾಸಿಟಿ' ಗಾಗಿ ಸುಮಾರು 10,000 ಕೋಟಿ ರುಪಾಯಿಗೂ ಹೆಚ್ಚು ಹಣ ಸುರಿದಿದ್ದರೆ ನಮ್ಮ ಗಣಿ ಧಣಿಗಳು ಬಹುತೇಕ ಅಷ್ಟೇ ಮೊತ್ತವನ್ನು ಗಣಿಗಾರಿಕೆಯಿಂದ ಎತ್ತಿದ್ದಾರೆ.
NASA Curiosity ಮಂಗಳ ಗ್ರಹದ ಮೇಲೆ ಜೀವಿಗಳು ವಾಸಿಸಲು ಸಾಧ್ಯವೇ ಎಂಬುದನ್ನು ತಿಳಿದುಕೊಳ್ಳುವುದಾದರೆ Reddys Curiosity ಭೂಸ್ವರ್ಗವನ್ನು ನಿರ್ನಾಮ ಮಾಡುವುದು. Anyway Bon Voyage to Mars Rover Curiosity! ಮಂಗಳ ಗ್ರಹ ಪಯಣದ ಬಗ್ಗೆ ತಿಳಿದುಕೊಳ್ಳುವ 'ಕುತೂಹಲವೇ', ಓದಿ 'ಕ್ಯೂರಿಯಾಸಿಟಿ' ಬಗ್ಗೆ...












Click it and Unblock the Notifications