ಜಾತಿ ಆಧಾರಿತ ಮತ: ರಾಮುಲು ಮೇಲೆ ಬಿಜೆಪಿಗೆ ಜಯ!

BJP leads Sreeramulu in caste based votes
ಬಳ್ಳಾರಿ, ನ.23: ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಮತ ಕ್ಷೇತ್ರಕ್ಕೆ ಮತದಾನ ನ.30 ರಂದು ನಡೆಯಲಿದ್ದು, ಬಿಜೆಪಿ ಹಾಗೂ ರೆಡ್ಡಿ ಬಣದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಜಾತಿ ಆಧಾರಿತ ಲೆಕ್ಕಾಚಾರದಂತೆ ಶ್ರೀರಾಮುಲುಗಿಂತ ಬಿಜೆಪಿ ಮುಂಚೂಣಿ ಪಡೆದಿದ್ದು, ಜಯ ಸಾಧಿಸುವ ಸೂಚನೆಯನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿದೆ.

ಬಳ್ಳಾರಿ ಗ್ರಾಮಾಂತರ ಉಪ ಚುನಾವಣಾ ಕಣದಲ್ಲಿ ಒಟ್ಟು 8 ಜನ ಸ್ಪರ್ಧಿಗಳಿದ್ದಾರೆ. ಒಟ್ಟು 20 ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 12 ನಾಮಪತ್ರ ಸ್ವೀಕೃತಗೊಂಡಿತ್ತು.

ಬಿಜೆಪಿಯ ಅಶೋಕ್ ಹಾಗೂ ನಾಗೇಂದ್ರರ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತಗೊಂಡಿತ್ತು. ನ.30ರಂದು ಉಪ ಚುನಾವಣೆಗೆ ಎಲ್ಲಾ ರೀತಿ ಸಿದ್ಧತೆ ಆಗಿದೆ ಎಂದು ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಜಾತಿಯೇ ಇಲ್ಲಿ ಗೆಲುವಿನ ಮಂತ್ರ: ಶ್ರೀರಾಮುಲು ಮಣಿಸಲು ಎಲ್ಲ ರೀತಿಯಲ್ಲಿ ಸಜ್ಜಾಗಿರುವ ಬಿಜೆಪಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕರೆ ತರುವ ಮೂಲಕ ಜಾತಿ ಆಧಾರಿತ ವೋಟ್ ಬ್ಯಾಂಕ್ ಖಾತ್ರಿ ಪಡಿಸಿಕೊಂಡಿದ್ದಾರೆ.

ಒಟ್ಟು ಮತದಾರರು: 1.72 ಲಕ್ಷ
ಎಸ್ಟಿ: 40 ಸಾವಿರ
ಎಸ್ಸಿ: 35 ಸಾವಿರ
ಲಿಂಗಾಯತ: 28 ಸಾವಿರ
ಕುರುಬ: 24 ಸಾವಿರ
ಮುಸ್ಲೀಂ: 30 ಸಾವಿರ
ಬಲಿಜ, ಬ್ರಾಹ್ಮಣ, ರೆಡ್ಡಿ, ಒಕ್ಕಲಿಗ, ಈಡಿಗ, ಬೋವಿ ಸೇರಿ ಒಟ್ಟಾರೆ: 15 ಸಾವಿರ
ಕಾಂಗ್ರೆಸ್ ಗೆಲ್ಲಬೇಕಾದ್ರೆ ಕುರುಬ ಮತ ಸಿದ್ದರಾಮಯ್ಯ ಪ್ಲಸ್ ಮುಸ್ಲಿಂ ವೋಟ್

ನ.30 ರಂದು ಮತದಾನ ಡಿ.4 ಫಲಿತಾಂಶ ಹೊರಬರಲಿದೆ. ಇಲ್ಲಿ ಲಿಂಗಾಯತ ಹಾಗೂ ಬಲಿಜ ಮತಗಳೇ ನಿರ್ಣಾಯಕವಾಗಲಿದೆ. ಶ್ರೀರಾಮುಲುಗೆ 75 ಸಾವಿರ ಜನರ ಬೆಂಬಲದ ಬಲ ಇದೆ ಎನ್ನಬಹುದಾದರೆ,

ಲಿಂಗಾಯತ, ಕುರುಬ ಉಳಿದ ಮತಗಳನ್ನು ಸೆಳೆಯುವುದರ ಜೊತೆಗೆ ಮುಸ್ಲೀಮ್ ಮತಗಳನ್ನು ಒಗ್ಗೂಡಿ 90 ಸಾವಿರ ಜನರ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಹೀಗಾಗಿ ಈಶ್ವರಪ್ಪ, ಯಡಿಯೂರಪ್ಪ ಸೇರಿ ರಾಮುಲು ಕೆಳಗೆ ತಳ್ಳಲು ಪ್ಲ್ಯಾನ್ ಹಾಕಿದ್ದಾರೆ.

ಟ್ರಕ್ ಓನರ್ ಗಳು, ಗಣಿ ಉದ್ಯಮದಿಂದ ನೊಂದ ಕೂಲಿ ಕಾರ್ಮಿಕರು ರೆಡ್ಡಿ ಬಣಕ್ಕೆ ಸೆಡ್ಡು ಹೊಡೆಯುವಂತೆ ಮಾಡಲು ಬಿಜೆಪಿ ಹರಸಾಹಸ ಮಾಡುತ್ತಿದ್ದು. ಸದ್ಯದ ಲೆಕ್ಕಾಚಾರದಂತೆ ಶ್ರೀರಾಮುಲುಗೆ ಜಾತಿ ಲೆಕ್ಕಾಚರದ ಮತಗಳೆ ಹಿನ್ನೆಡೆಯನ್ನು ಸೂಚಿಸುತ್ತಿದೆ. ಆದರೆ, ರೆಡ್ಡಿ ಬಣ ನೀಡುವ ಆಶ್ವಾಸನೆಗಳಿಗೆ ಮನಸೋಲುವ ಮತದಾರ ಉಲ್ಟಾ ಹೊಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+