ಸ್ತ್ರೀಪೀಡಕ ಸಯನೈಡ್ ಮೋಹನ್ ವಿರುದ್ಧ ಮಹಿಳೆ ಗೌಪ್ಯ ಸಾಕ್ಷ್ಯ

ಅಭಿಯೋಜಕರಾಗಿ ಚೈಯಬ್ಬ ಬ್ಯಾರಿ: ಸರಣಿ ಹತ್ಯಾ ಪ್ರಕರಣದ ವಿಚಾರಣೆಯಲ್ಲಿ ಚೈಯಬ್ಬ ಬ್ಯಾರಿ ಸರಕಾರಿ ಅಭಿಯೋಜಕರಾಗಿದ್ದಾರೆ. ಜಂಟಿ ಅಭಿಯೋಜಕ ಸ್ಥಾನದಿಂದ 3 ವರ್ಷಗಳ ಹಿಂದೆ ನಿವೃತ್ತರಾಗಿದ್ದ ಚೈಯಬ್ಬರನ್ನು ಸರಣಿ ಹತ್ಯಾ ಪ್ರಕರಣವನ್ನು ಮುನ್ನಡೆಸುವುದಕ್ಕಾಗಿಯೇ ವಿಶೇಷ ನೇಮಕಾತಿ ಮಾಡಲಾಗಿದೆ. ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಗಂಭೀರ ಸ್ವರೂಪದ ಪ್ರಕರಣ ಇದಾಗಿರುವುದರಿಂದ ಅನುಭವಿಗಳ ಆಯ್ಕೆ ಮಾಡಲಾಗಿದೆ.
ಮೂರು ಪ್ರಕರಣ ವಿಚಾರಣೆ: ಪ್ರಥಮವಾಗಿ ಮೂರು ಪ್ರಕರಣಗಳ ವಿಚಾರಣೆ ನಡೆಯಲಿದೆ. ಬಂಟ್ವಾಳ ಬರಿಮಾರಿನ ಅನಿತಾ ಕೊಲೆಗೆ ಸಂಬಂಧಿಸಿದ ವಿಚಾರಣೆ ಇಂದಿನಿಂದ ನ.26ರವರೆಗೆ ನಡೆ ಯಲಿದೆ. ಬಳಿಕ ವೇಣೂರಿನ ಲೀಲಾವತಿ ಕೊಲೆ ಪ್ರಕರಣದ ವಿಚಾರಣೆ ನ.28ರಿಂದ ಡಿ.2ರ ವರೆಗೆ, ಸುಳ್ಯದ ಸುಮನಾ ಕೊಲೆ ಪ್ರಕರಣದ ವಿಚಾರಣೆ ಡಿ.3ರಿಂದ 9ರವರೆಗೆ ನಡೆಯಲಿದೆ. ಎಲ್ಲ ಪ್ರಕರಣಗಳು ಐದು ದಿನ ನಡೆದರೆ, ಅನಿತಾ ಪ್ರಕರಣ ಮಾತ್ರ ಆರು ದಿನ ನಡೆಯಲಿದೆ.
ಒಟ್ಟು 20 ಕೊಲೆ ಪ್ರಕರಣಗಳಲ್ಲಿ 90 ಸಾಕ್ಷಿದಾರರ ವಿಚಾರಣೆ ನಡೆಯಲಿದೆ. ಈ ಎಲ್ಲ ಸಾಕ್ಷಿದಾರರ ಹೇಳಿಕೆಗಳನ್ನೂ ಸಿಐಡಿ ಪೊಲೀಸರು ಈಗಾಗಲೇ ದಾಖಲಿ ಸಿಕೊಂಡಿದ್ದಾರೆ. ಪ್ರಕರಣದ ವಿಚಾರಣೆಗೆ ಹಾಜರಾಗುವ ಸಾಕ್ಷಿಗಳಿಗೆ ಪ್ರಯಾಣ ಭತ್ಯೆ ನೀಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.












Click it and Unblock the Notifications