ತಾಕತ್ತಿದ್ದರೆ ಸರಕಾರ ಬೀಳಿಸಿ: ಶ್ರೀರಾಮನಿಗೆ ಸರಕಾರಿ ಸವಾಲ್

ಶ್ರೀರಾಮುಲು ಮತ್ತು ರೆಡ್ಡಿ ಸೋದರರು ಈ ಹಿಂದೆ ಅನೇಕ ಬಾರಿ ಇಂತಹ ಪ್ರಯತ್ನಗಳಿಗೆ ಕೈಹಚ್ಚಿ ಕೈಸುಟ್ಟುಕೊಂಡಿದ್ದಾರೆ. ಇದು ಇಡೀ ದೇಶಕ್ಕೆ ತಿಳಿದ ವಿಚಾರ ಎಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಸದಾನಂದರು ಹೇಳಿದರು.
ಪಕ್ಷದಿಂದ ಹೊರಬಿದ್ದ ನಂತರ ಶ್ರೀರಾಮುಲು ಶಕ್ತಿ ಕುಂದಿದೆ. ಅವರ ಹಿಂದೆಮುಂದೆ ಮಂದೆಯಲ್ಲಿ ಒಡಾಡುತ್ತಿರುವ ಚುನಾಯಿತ ಪ್ರತಿನಿಧಿಗಳಿಂದ ಅವರಿಗೆ ಒಂದಷ್ಟು ಬೆಂಬಲವಿರಬಹುದು ಅಷ್ಟೇ. ಆದರೆ ಜನಬೆಂಬಲ ಅಷ್ಟಕ್ಕಷ್ಟೇ. ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಶ್ರೀರಾಮುಲು ನಡುವಣ ಸಂಬಂಧ ಮೊದಲಿನಿಂದಲೂ ಇತ್ತು. ಅದೀಗ ಬಹಿರಂಗವಾಗಿದೆ ಅಷ್ಟೆ ಎಂದು ಸದಾನಂದರು ಹೇಳಿದರು.
ರಾಮುಲು ಬೆನ್ನಿಗೆ ನಿಂತಿರುವ ಶಾಸಕರು, ಸಂಸದರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವುದು ಖಚಿತ. ಮೊದಲು ಎಲೆಕ್ಷನ್, ಆಮೇಲೆ ಆಕ್ಷನ್ ಎಂದು ಸದಾನಂದ ಗೌಡರು ಹಾಸ್ಯಭರಿತ ಉತ್ತರ ನೀಡಿದರು.












Click it and Unblock the Notifications