ಯಡಿಯೂರಪ್ಪರಿಗೆ ಕಣ್ಣೀರು ಹಾಕಿಸಿದವರಿಗೆ ಪಾಠ ಕಲಿಸಿ: ಶೋಭಾ

ಯಡಿಯೂರಪ್ಪ ಅವರ ಜನಪರ ಯೋಜನೆಗಳನ್ನು ಸಹಿಸದೆ ಕೊಡಲಾರದ ಕಷ್ಟ ಕೊಟ್ಟು ಆನಂದ ಅನುಭವಿಸಿದವರಿಂದಾಗಿ ಈ ಚುನಾವಣೆ ಬಂದಿದೆ.
ಒಂದೂವರೆ ವರ್ಷದ ಈ ಚುನಾವಣೆ ಖಂಡಿತಾ ಬೇಕಾಗಿರಲಿಲ್ಲ. ಜನರು ಅವರ ವಿರುದ್ಧ ಮತ ಚಲಾಯಿಸಿ ಬಿಜೆಪಿಗೆ ಅದರಲ್ಲೂ ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಬೇಕು ಎಂದು ಶೋಭಾ ಕೋರಿದರು.
ಹಲಕುಂದಿ, ಮಿಂಚೇರಿ, ಸಂಜೀವರಾಯನ ಕೋಟೆ ಹಾಗೂ ಎತ್ತಿನ ಬೂದಿಹಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ, ಕಾನೂನು ಸಚಿವ ಸುರೇಶಕುಮಾರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಹಾಗೂ ವಿವಿಧ ವಾರ್ಡುಗಳಿಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿ ಗಾದಿಲಿಂಗಪ್ಪಪರ ಪ್ರಚಾರ ಮಾಡಿದರು.
ಶಕ್ತಿ ಪ್ರದರ್ಶನ: ಕಳೆದ ಮೂರು ದಿನಗಳಿಂದ ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿರುವ ಬಿಜೆಪಿ ಶನಿವಾರ ಕ್ಷೇತ್ರದಲ್ಲಡೇ ತನ್ನ ಶಕ್ತಿ ಪ್ರದರ್ಶನ ನಡೆಸಿತು. ಸಚಿವ ಸಂಪುಟದ ಹಲವು ಸಚಿವರು, ಶಾಸಕರು, ರಾಜ್ಯ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ಕೇಂದ್ರ ಪುರ್ನವಸತಿ ಅಧ್ಯಕ್ಷ ಕೆ ರಾಮಲಿಂಗಪ್ಪ ಸೇರಿದಂತೆ ಅನೇಕರು ಬಿರುಸಿನ ಪ್ರಚಾರ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು.












Click it and Unblock the Notifications