ಅತ್ತಿಗೆ ಮೇಲೆ ಕೋಪಕ್ಕೆ ಬೆಂಕಿಗೆ ಹಚ್ಚಿಕೊಂಡ ವಿದ್ಯಾರ್ಥಿ

ಆದರೆ, ಕೋಣೆಯಲ್ಲಿ ಬೆಂಕಿ ಹಚ್ಚಿಕೊಂಡು ಪ್ರಾಣ ಕಳೆದುಕೊಂಡ ಸುನೀಲ್ ಗೆ ಮಾತ್ರ ತನ್ನ ನಿರ್ಧಾರದ ಮೇಲೆ ಯಾವುದೇ ಶಂಕೆ ಇರಲಿಲ್ಲ. ತನ್ನ ದುಃಸ್ಥಿತಿಗೆ ಅತ್ತಿಗೆಯೇ ಕಾರಣ ಎಂದು ನಿರ್ಧರಿಸಿ ಸಾವನ್ನಪ್ಪಿದ್ದ.
24 ವರ್ಷದ ಸುನೀಲ್ ಗಂಗಾಧರ್ ಕೋಟೆಕಲ್ ಪುಣೆಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ. ಆತನ ಅಣ್ಣ ವೈಟ್ ಫೀಲ್ಡ್ ನಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿಗೆ ಬಂದಿದ್ದ ಸುನೀಲ್ ಅಣ್ಣನ ಮನೆಗೆ ಹೋಗದೆ ಇನ್ ಫೆಂಟ್ರಿ ರಸ್ತೆ ಬಳಿ ರೆಹೋಟೆಲ್ ನಲ್ಲಿ ರೂಮ್ ಮಾಡಿಕೊಂಡಿದ್ದ.
ಖರ್ಚಿಗೆ ಕಾಸಿಲ್ಲ ಸಾವಿಗೆ ಕಾರಣವಿದೆ: ಸುನೀಲ್ ತನ್ನ ಡೆತ್ ನೋಟ್ ನಲ್ಲಿ ತನ್ನ ಅತ್ತಿಗೆಯನ್ನು ಬೈದಿದ್ದಾನೆ. ನನ್ನ ಸಾವಿಗೆ ಅತ್ತಿಗೆ ನೀಡಿದ ಮಾನಸಿಕ ಕಿರುಕುಳವೇ ಕಾರಣ. ಮೊದಲೆಲ್ಲ ನನ್ನ ಖರ್ಚಿಗೆ ಸರಿಯಾಗಿ ಹಣ ಕಳಿಸುತ್ತಿದ್ದ ನನ್ನ ಅಣ್ಣ, ನಂತರ ಸುಮ್ಮನೆ ಪ್ರಶ್ನೆ ಮಾಡಲು ಆರಂಭಿಸಿದ. ಅತ್ತಿಗೆ ಮಾತು ಕೇಳಿ ಅಣ್ಣ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಬರೆದಿದ್ದ.
ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಸುನೀಲ್ ಅಣ್ಣನನ್ನು ಕರೆದು ವಿಚಾರಿಸಿದ್ದಾರೆ. ಹಣ ಕಳಿಸುತ್ತಿದ್ದದ್ದು ನಿಜ. ಕೆಲ ತಿಂಗಳುಗಳಿಂದ ಹಣ ಕಳಿಸಿಲ್ಲ. ಅವನು ಓದುವುದನ್ನು ಬಿಟ್ಟು ಮಿಕ್ಕ ಎಲ್ಲಾ ಚಟಗಳನ್ನು ಮೈಗೆ ಹತ್ತಿಸಿಕೊಂಡಿದ್ದ.
ಪ್ರತಿ ತಿಂಗಳು 5-6 ಸಾವಿರ ರೂ ಕಳಿಸುತ್ತಿದ್ದೆ. ಇದರಲ್ಲಿ ನನ್ನ ಪತ್ನಿಯದ್ದು ಏನು ತಪ್ಪಿಲ್ಲ. ಅಸಲಿಗೆ ನಾನು ನನ್ನ ತಮ್ಮನಿಗೆ ಹಣ ಕಳಿಸುವ ವಿಷಯ ಆಕೆಗೆ ಗೊತ್ತೇ ಇಲ್ಲ ಎಂದು ಸುನೀಲ್ ಅಣ್ಣ ಹೇಳಿಕೆ ನೀಡಿದ್ದಾನೆ. ಪೊಲೀಸರು ಸದ್ಯಕ್ಕೆ ಅಣ್ಣನ ಹೇಳಿಕೆ, ತಮ್ಮನ ಸಾವಿನ ಪತ್ರ ತುಲನೆಯಲ್ಲಿ ತೊಡಗಿದ್ದಾರೆ.












Click it and Unblock the Notifications