ಬಾಬಾ ರಾಮದೇವ್ ಗೆ ಮದ್ವೆ ಆಗೋ ಆಸೆ ಬಂದಿದೆ!

ನಾನು ಕೂಡಾ ಎಲ್ಲರಂತೆ ಸಂಸಾರ ಹೊಂದಬೇಕು. ಮದುವೆಯಾಗಬೇಕು ಎನಿಸಿದೆ ಎಂದು ನ.18ರಂದು ಲಖ್ನೋದ ಸಾರ್ವಜನಿಕ ಯೋಗ ಶಿಬಿರ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ್ ಅವರು ಮೈಕಿನ ಮುಂದೆ ಪಿಸುಗುಟ್ಟಿದ್ದಾರೆ.
ಬಾಬಾ ಅವರ ಇಚ್ಛೆ ಕೇಳಿಸಿಕೊಂಡ ಭಕ್ತಾದಿಗಳಲ್ಲಿ ಕೆಲವರು ಬಾಬಾ ಎಲ್ಲೋ ಹಾಸ್ಯ ಮಾಡುತ್ತಿರಬೇಕು ಎಂದು ಕೊಂಡರು. ಇನ್ನು ಕೆಲವರು ಬಾಬಾ ಹೇಳಿಕೆ ಕೇಳಿ ದಿಗ್ಭ್ರಮೆಗೆ ಒಳಗಾದರು.
ಬಾಬಾ ಮದುವೆ ಮಾತೆದ್ದಿದರೆ ಜನರ ಮನಸ್ಸಿನಲ್ಲಿ ಸುಳಿಯುವ ಮೊಟ್ಟಮೊದಲ ಹೆಸರು ಐಟಂ ಗರ್ಲ ರಾಖಿ ಸಾವಂತ್. ರಾಹುಲ್ ಗಾಂಧಿಗೆ ಕೈ ಕೊಟ್ಟು ಬಾಬಾ ಮೈಕಟ್ಟು ನೋಡಿ ಮನಸಾರೆ ಮೆಚ್ಚಿದ್ದ 32 ವರ್ಷದ ರಾಖಿ, ಬಿಗ್ ಬಾಸ್ ಶೋಗೆ ಬಂದು ನನ್ನ ಜೊತೆ ಕಾಲಕಳೆಯಿರಿ ಎಂದಿದ್ದಳು.
ಬಿಂಕದ ರಾಣಿ ರಾಖಿಯಂತೂ ಬಾಬಾ ಮಾತುಗಳನ್ನು ಕೇಳಿ ಹಾರಾಡುತ್ತಾಳೆ. ಆದರೆ, ಬಾಬಾ ಮನಸ್ಸಿನಲ್ಲಿ ಯಾರ ಚಿತ್ರವಿದೆಯೋ ಯಾವನಿಗ್ ಗೊತ್ತು. ಸುಮ್ನೆ ತಮಾಷೆಗೆ ಹೇಳಿದ್ದು ಅಂಥ ಬಾಬಾ ಹೇಳಿದ್ದರೂ ನಂಬಬೇಕು.












Click it and Unblock the Notifications