ಪಾರ್ಟ್ ಟೈಂ ಮುಖ್ಯಮಂತ್ರಿ; ರೋಲ್‌ಕಾಲ್ ಗೃಹ ಸಚಿವ

ಪಾರ್ಟ್ ಟೈಂ ಮುಖ್ಯಮಂತ್ರಿ ಸದಾನಂದಗೌಡ ಮತ್ತು ರೋಲ್‌ಕಾಲ್ ಗೃಹ ಸಚಿವ ಅಶೋಕ್ ಅವರಿಂದ ಈ ಕೆಲಸ ಸಾಧ್ಯವಿಲ್ಲ. ಆದ್ದರಿಂದ ಮುಖ್ಯ ಕಾರ್ಯದರ್ಶಿ ಮತ್ತು ಹೈಕೋರ್ಟ್‌ಗೆ ಈ ಸಂಬಂಧ ಮನವಿ ಮಾಡುತ್ತಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪ ಪಾದುಕೆ ಹೊತ್ತ ಸದಾನಂದ: ಶ್ರೀರಾಮ ಕಾಡಿಗೆ ತೆರಳಿದಾಗ ಆತನ ಪಾದುಕೆಯನ್ನು ಇಟ್ಟು ಆಡಳಿತ ನಡೆಸಿದಂತೆ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಮನೆಯಿಂದ ರವಾನೆ ಯಾಗುವ ಸಂದೇಶಗಳಿಗೆ ಅನುಗುಣವಾಗಿ ರಾಜ್ಯಾಡಳಿತ ನಡೆಸುತ್ತಿದ್ದಾರೆಯೇ ವಿನಃ ಸ್ವಂತಬುದ್ಧಿಯಿಂದ ಅಲ್ಲ ಎಂದು ಸದಾನಂದ ಗೌಡರ ವಿರುದ್ಧ ವಿಶ್ವನಾಥ್ ಟೀಕಾಪ್ರಹಾರ ಮುಂದುವರಿಸಿದರು.
ಲೋಕಾಯುಕ್ತ ಎಡಿಜಿಪಿ ಸ್ಥಾನದಿಂದ ಜೀವನ್‌ಕುಮಾರ್ ಗಾಂವ್ಕರ್ ಅವರನ್ನು ಎತ್ತಂಗಡಿ ಮಾಡಿದ ಸರಕಾರ ತಾಕತ್ತಿದ್ದರೆ ಸಿಐಡಿ ಡಿಜಿಪಿ ಶಂಕರ್ ಬಿದರಿ ಅವರನ್ನು ವರ್ಗಾವಣೆ ಮಾಡಲಿ ಎಂದು ವಿಶ್ವನಾಥ್ ಸವಾಲು ಹಾಕಿದರು. ನಿಮಗೆ ನಿಮ್ಮ ಜಾತಿಯವರೇ ಲೋಕಾಯುಕ್ತರಾಗಬೇಕೆ? ಆ ಸ್ಥಾನಕ್ಕೆ ಅರ್ಹರಾದವರು ಬೇರೆ ಜಾತಿಯಲ್ಲಿ ಇಲ್ಲವೆ? ಎಂದು ಅವರು ವಾಗ್ದಾಳಿ ನಡೆಸಿದರು.












Click it and Unblock the Notifications