ಅಕ್ರಮ ಗಣಿ ವರದಿ: ನ್ಯಾ.ಹೆಗ್ಡೆಗೆ ಗಣಿ ದೊರೆ ಕುಮ್ಮಕ್ಕು

ಹಿಂದಿನ ಲೋಕಾಯುಕ್ತರು ಯಾವ ಗಣಿ ಉದ್ಯಮಿಯೊಂದಿಗೆ ಕೈ ಜೋಡಿಸಿದ್ದರು ಎಂಬುದನ್ನು ಕಾಲ ಬಂದಾಗ ಬಹಿರಂಗಪಡಿಸುತ್ತೇನೆ. ಆದರೆ ಈ ಗಣಿ ಉದ್ಯಮಿ ಮಾತ್ರ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿಲ್ಲ. ಈ ಬಗ್ಗೆ ಶೀಘ್ರದಲ್ಲೆ ವಿವರ ಬಹಿರಂಗಪಡಿಸುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಲುಕಿಸಲು ಗಣಿ ಮಾಫಿಯಾ ದೊರೆಯೊಬ್ಬರ ಪ್ರಭಾವದಿಂದ ನ್ಯಾ. ಹೆಗ್ಡೆ ತನಿಖಾ ವರದಿಯನ್ನು ನೀಡಿದರು. ಮಾಜಿ ಲೋಕಾಯುಕ್ತರು ನೀಡಿರುವ ತನಿಖಾ ವರದಿ ಸಂಪೂರ್ಣ ರಾಜಕೀಯ ಪ್ರೇರಿತ ಎಂದೂ ಅವರು ಆಕ್ಷೇಪವೆತ್ತಿದರು.
ನಿವೃತ್ತ ಲೋಕಾಯುಕ್ತ ಹೆಗ್ಡೆ ಅವರಿಗೆ ಮುಖ್ಯಮಂತ್ರಿ ಪದವಿ ಮೇಲೆ ಕಣ್ಣಿತ್ತು. ಈ ಬಗ್ಗೆ ಎರಡು ವರ್ಷಗಳ ಹಿಂದೆಯೇ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಲು ನನಗೆ 6 ತಿಂಗಳು ಅವಕಾಶ ಕೊಡಿ ಎಂದು ಕೋರಿದ್ದರು ಎಂದು ರೇಣುಕಾಚಾರ್ಯ ಹೇಳಿದರು.












Click it and Unblock the Notifications