ಹುಳುಕು ಬಹಿರಂಗವಾಯಿತೆಂದು ನ್ಯಾ.ಹೆಗ್ಡೆ ಮೌನಕ್ಕೆ ಶರಣು

'ಯಡಿಯೂರಪ್ಪ ಬಲಿಯಾದರೇ' ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ತಮ್ಮ ವಿರುದ್ಧ ಬರುತ್ತಿದ್ದ ಎಲ್ಲಾ ಆರೋಪಗಳಿಗೂ ಪ್ರತಿಕ್ರಿಯೆ ನೀಡುತ್ತಿದ್ದ ಸಂತೋಷ್ ಹೆಗ್ಡೆ, ಈಗ ತಮ್ಮದೇ ಸಂಸ್ಥೆಯ ಎಸ್ಪಿಯಾಗಿದ್ದ ಮಧುಕರ ಶೆಟ್ಟಿ ನೀಡಿರುವ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದನ್ನು ನೋಡಿದರೆ ಲೋಕಾಯುಕ್ತದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಒಪ್ಪಿಕೊಂಡಂತಾಗಿದೆಯಲ್ಲದೆ ನಡೆಯುತ್ತಿದ್ದ ಭ್ರಷ್ಟಾಚಾರದಲ್ಲಿ ಅವರಿಗೂ ಪಾಲು ಸಂದಾಯವಾಗುತ್ತಿತ್ತಾ ಎಂದು ರೇಣುಕಾಚಾರ್ಯ ಅನುಮಾನ ವ್ಯಕ್ತಪಡಿಸಿದರು.
ಲೋಕಾಯುಕ್ತ ಎಡಿಜಿಪಿಯಾಗಿದ್ದ ಗಾಂವ್ಕರ್ ಗೆ ಮಾಜಿ ಪ್ರಧಾನಿ ದೇವೇಗೌಡರು ಬೆದರಿಕೆ ಹಾಕಿರುವ ಕುರಿತು ಈ ತನಕ ಸಂತೋಷ್ ಹೆಗ್ಡೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೇವೇಗೌಡರ ವಿರುದ್ಧ ಹೇಳಿಕೆ ನೀಡಿದರೆ ತಮ್ಮ ರಾತ್ರಿ ಚಟುವಟಿಕೆಗಳ ಹುಳುಕುಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಹಿರಂಗಪಡಿಸುತ್ತಾರೆಂಬ ಭಯವೇ ಎಂದು ಪ್ರಶ್ನಿಸಿದರು.
ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಪೂರ್ವಾಗ್ರಹ ಪೀಡಿತರಾಗಿ ಯಡಿಯೂರಪ್ಪ ವಿರುದ್ಧ ಅಕ್ರಮ ಗಣಿಗಾರಿಕೆ ಸಂಬಂಧ ತಪ್ಪು ವರದಿ ನೀಡಿದ್ದಾರೆ ಎಂದು ಕಿಡಿಕಾರಿದರು. ವಿಧಾನಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಮತ್ತಿತರರು ಹಾಜರಿದ್ದರು.












Click it and Unblock the Notifications