ಕಳ್ಳನಂತೆ ಪರಾರಿಯಾಗಿದ್ದ ಇನ್ಸ್‌ಪೆಕ್ಟರ್ ಶೆಟ್ಟಿಗೆ ಭರ್ಜರಿ ಪೋಸ್ಟಿಂಗ್

ಅಸಲಿಗೆ ಲೋಕಾಯುಕ್ತ ಪೊಲೀಸರ ಜತೆ ಒಂದು ವಾರ ಕಾಲ ಕಳ್ಳ-ಪೊಲೀಸ್ ಆಟ ಆಡಿದ್ದ ಇನ್‌ಸ್ಪೆಕ್ಟರ್ ರತ್ನಾಕರ ಶೆಟ್ಟಿಯನ್ನು ಕೊನೆಗೂ ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟುಬಂದಿದ್ದರು. ಹೀಗೆ ನ್ಯಾಯಾಂಗ ಬಂಧಿಯಾಗಿದ್ದ ರತ್ನಾಕರ ಶೆಟ್ಟಿಯನ್ನು ಮತ್ತೆ ಅಧಿಕಾರಕ್ಕೆ ತಂದಿರುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಡುತ್ತಿದೆ.
ವಿಚಾರಣೆ ಕಾಯ್ದಿರಿಸಿ, ಶೆಟ್ಟಿಯನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಎನು ಮಾಡುತ್ತಿದ್ದಾರೆ? ಅದೂ ಇಷ್ಟು ಬೇಗ ರತ್ನಾಕರ ಶೆಟ್ಟಿ ಕೇಸು ಖಲಾಸ್ ಆಗಿಹೋಯಿತಾ? ಅಥವಾ ಲೋಕಾಯುಕ್ತ ಪೊಲೀಸರು ಸುಮ್ ಸುಮ್ನೆ ಕಳ್ಳ-ಪೊಲೀಸ್ ಆಟವಾಡಿದರಾ? ಕೇವಲ ಎರಡೇ ತಿಂಗಳಲ್ಲಿ ಲೋಕಾಯುಕ್ತ ದಾಳಿ ಪ್ರಹಸನಕ್ಕೆ ಮಂಗಳ ಹಾಡಿ, ಮತ್ತೆ ಸೇವೆಗೆ ಮರಳುವಷ್ಟು ಶೆಟ್ಟಿ ಪ್ರಭಾವ ಬೀರಿದರೆ?
ಪದೇ ಪದೆ ವರ್ಗಾವಣೆ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದ ಮುಖ್ಯಮಂತ್ರಿ ಗೌಡರು ಮೊನ್ನೆ ದಿಢೀರನೆ ನೂರಾರು ಮಂದಿ ಖಾಕಿಗಳನ್ನು ವರ್ಗಾಯಿಸಿದ್ದಾರೆ. ಅದರಲ್ಲಿ ಸನ್ಮಾನ್ಯ ರತ್ನಾಕರ ಶೆಟ್ಟಿ ಅವರ ಹಜೆಸರೂ ಕಾಣಿಸಿಕೊಂಡಿದ್ದು, ರತ್ನಾಕರ ಶೆಟ್ಟಿ- ಪಿಆರ್ ಸಿ, ಮುಖ್ಯ ಕಚೇರಿ ಎಂದು ಸೂಚಿಸಲಾಗಿದೆ. ಏನೋ ದೊಡ್ಡೋರ ವಿಷಯ ನಮಗ್ಯಾಕೆ ಬಿಡಿ.












Click it and Unblock the Notifications